ಬಳ್ಳಾರಿ ಗ್ರಾಮೀಣ: ಸಿಎಂಎಸ್ ಮುಖಂಡರಿಂದ‌ ಬಿ. ನಾಗೇಂದ್ರ ಪರ ಪ್ರಚಾರ

ಬಳ್ಳಾರಿ, ಮೇ. ೫: ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಅವರ ಪರವಾಗಿ ಛಲವಾದಿ ಮಹಾಸಭಾ(ಸಿಎಂಎಸ್) ಜಿಲ್ಲಾ‌ ಮುಖಂಡರು ಗುರುವಾರ ತಾಲೂಕಿನ‌ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಸಿಎಂಎಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ. ನರಸಪ್ಪ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಕ್ಷೇತ್ರದ
ವ್ಯಾಪ್ತಿಯಲ್ಲಿ ಬರುವ ಚಾಗನೂರು ಗ್ರಾಮದಲ್ಲಿ ಶಾಸಕ ಬಿ ನಾಗೇಂದ್ರ ಅವರ ಪರವಾಗಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಗಾದಿಲಿಂಗಪ್ಪ ಬಿ ಗೋನಾಳ್, ಡಿ ರಾಮಕೃಷ್ಣ, ಬಸವರಾಜ, ನಾಗರಾಜ ಹಳೆ ಮೋಕ, ಶೇಖಣ್ಣ, ಕಪ್ಪಗಲ್ಲು ಲೋಕೇಶ್, ಮಾನಯ್ಯ ಬಿ ಗೋನಾಳು, ಭಾಗವಹಿಸಿದ್ದರು.
*****

Leave a Reply

Your email address will not be published. Required fields are marked *