ನಾರಾ ಭರತ್ ರೆಡ್ಡಿ, ಜೆ ಎನ್ ಗಣೇಶ್ ಪರ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಪ್ರಚಾರ

ಬಳ್ಳಾರಿ, ಮೇ೫: ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಅವರು ಬಳ್ಳಾರಿ ನಗರ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ನಾರಾ ಭರತ್ ರೆಡ್ಡಿ ಮತ್ತು ಜೆ ಎನ್‌ಗಣೇಶ್ ಪರ ಮತ ಯಾಚಿಸಿದರು.


ಹನುಮಾನ್ ನಗರ 5 ನೇ ವಾರ್ಡ್ ಕಾಕರ್ಲ್ ತೋಟ ಹಾಗೂ ಶ್ರೀಧರ ಗಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ ಗುಡಾರ ಬೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರೆಪ್ಪ ಅವರು, ಬಿಜೆಪಿ ಸರಕಾರ ಅಲೆಮಾರಿ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಅಲೆಮಾರಿಗಳಿಗೆ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿ ಮಂಜೂರಾದ ಅನುದಾನವನ್ನು ವಾಪಸ್ಸು ಪಡೆದಿದೆ ಎಂದು ದೂರಿದರು.
ಪರಿಶಿಷ್ಟ ಜಾತಿ ವಿಂಗಡನೆಯಲ್ಲಿ, 89 ಸಮುದಾಯಗಳಿಗೆ ಕೇವಲ 1% ನೀಡಿ ಕೇಂದ್ರಕ್ಕೆ ಅವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ್ದು ಅನ್ಯಾಯವಾಗಿದೆ ಮತ್ತು ಮರು ಪರಿಶೀಲನೆ ಆಗಬೇಕಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಗುಜರಾತ್ ಮಾದರಿ ರಾಜಕಾರಣ ಮಾಡುತ್ತಿರುವುದರಿಂದ ಬಡವರು, ಮಾದ್ಯಮ ವರ್ಗದವರ ಬದುಕು ಬೀದಿಗೆ ಬಂದಿದ್ದಾರೆ, ಮಾದ್ಯಮ ವರ್ಗದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದಾರೆ ಎಂದು ಆತಂಕ‌ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯಗಳು ಬೆಂಬಲಿಸ ಬೇಕು ಎಂದು ಹೇಳಿದರು.
ಪ್ರಚಾರ ಕಾರ್ಯದಲ್ಲಿ ಕಾಕರ್ಲ ತೋಟದ ಕುಡುತಿನಿ ಬೀಷಣ್ಣ, ಗಂಗಾಧರ, ಬಳ್ಳಾರಿ ಬುಡ್ಗಜಂಗಮ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ (ಸನ್ನಿ), ರಾಜಶೇಖರ್, ಜಂಬಣ್ಣ ಬಲಗೊಲ್ಲ, ಸುಂಕಪ್ಪ ಮತ್ತಿತರರು ಭಾಗವಹಿಸಿದ್ದರು.
*****

Leave a Reply

Your email address will not be published. Required fields are marked *