ಅನುದಿನ ಕವನ-೯೩೯, ಕವಿ: ಮುನಿರಾಜು, ಬೆಂಗಳೂರು, ಕವನದ ಶೀರ್ಷಿಕೆ: ಮಳೆಯಲಿ….

ಮಳೆಯಲಿ…..

ಬಾನ ತುಂಬಾ ಕಾರ್ಮೋಡ
ಬಸಿರಾದ ಮೋಡಗಳಿರಲು
ಬಿಸಿಲಿಗೆ ಬಾಯ್ತೆರೆದು
ದಾಹದಿ ಧರಣಿ ಕಾದಿರಲು
ಬೀಸಿ ಬಂದ ತಂಗಾಳಿಯು
ಮೋಡ ಮೋಡಗಳು
ಮೋಹದಿ ಮುದ್ದಿಡಲು
ಗುಡುಗು ಸಿಡಿಲು ಮಿಂಚು
ಬಾನಲ್ಲಿ ರುದ್ರ ನರ್ತನವು
ಹನಿ ಹನಿ ಮಳೆ ಸುರಿದಿರಲು
ಕೆರೆ ಕೊಳ್ಳಗಳು ತುಂಬಿ
ಹರಿದು ನದಿ ಜಲಪಾತವು
ಭುವಿಯಲಿ ಹಸಿರ ಸಂಭ್ರಮ
ಎಲ್ಲೆಡೆ ಜಲಧಾರೆಯು
ಸ್ವರ್ಗವೆ ಧರೆಗಿಳಿದಂತೆ ಸಂಭ್ರಮ

ನಾನು ನೀನು ಮತ್ತು ಮಳೆ
ಒಂದೆ ಕೊಡೆಯ ಕೆಳಗೆ
ಜಿನು ಜಿನುಗೊ ಮಳೆಯಲಿ
ನೆನೆನೆದು ದೇಹ ತಂಪಾದರು
ನೆನಪುಗಳು ಮನದಲಿ
ಬಿಸಿ ಬಿಸಿಯೇರಿಸುತ್ತಿರಲು
ಮೌನ ಮೌನವೆ ಮಾತಾಗಿರಲು
ಮೃದು ಮಧುರ ಸ್ಪರ್ಶಕೆ
ನೆನೆದು ನೆನೆಯದಂತೆ
ಮಾತನಾಡಿತ್ತು ಹೆಜ್ಜೆಗಳು
ಹಸಿರು ಸಿರಿಯ ನಡುವೆ
ಹೊರಟ ನಾವಿಬ್ಬರು ರಾಜಾರಾಣಿ
ಪ್ರಕೃತಿಯೆ ಸ್ವಾಗತ ಕೋರಿದಂತೆ
ಪುಳಕಗೊಳಿಸಿದೆ ಮೈಮನವು

✍️ಮುನಿರಾಜು, ಬೆಂಗಳೂರು

Leave a Reply

Your email address will not be published. Required fields are marked *