ಅನುದಿನ ಕವನ-೯೬೫, ಕವಿ:ಮಹಿಮ, ಬಳ್ಳಾರಿ, ಚಿತ್ರ:ಯಜ್ಞ ಮಂಗಳೂರು

ಬರೆಯುವೆನೆಂಬ ಹಮ್ಮೇಕೆ
ಹಳ್ಳಿಗಳಲ್ಲಿವೆ ಓದು ಬರಹ ಬರದ
ಅಕ್ಕರೆಯ ಮನಗಳು

ನೀನು ಬರೆಯುವುದು ಪೆನ್ನಿನಿಂದ
ಅವರು ಬರೆಯುತ್ತಾರೆ ಹೃದಯದಿಂದ
ಮಾತನಾಡುತ್ತಾರೆ ಮಮತೆಯಿಂದ

ನಿನಗಿರದ
ಭಾವನೆಗಳಿವೆ ಅವರಲ್ಲಿ
ನಿನಗೆ ಬದುಕುವ ಚಿಂತೆ
ಅವರು ನಿನ್ನಂತೆ ಬರೆಯಲಾರರು
ಆದರೆ ನಿನ್ನ ಬದುಕಿಸುವವರು ಅವರು

ಮೂಗು ಮುರಿಯಬೇಡ
ದಡ್ಡರವರಲ್ಲ
ಹಳ್ಳಿ ಗಮಾರರವರಲ್ಲ
ನಿನ್ನ ತೋಳಿಗೆ ಬಲ ನೀಡುವವರು
ಅವರು
ನಿನಗಿಂತ ಬಲಿಷ್ಟರು

-ಮಹಿಮ, ಬಳ್ಳಾರಿ

Leave a Reply

Your email address will not be published. Required fields are marked *