ಹಿರಿಯ ಜಾನಪದ ಕಲಾವಿದ ದರೋಜಿ ಅಶ್ವ ರಾಮಣ್ಣ ಅವರಿಗೆ ಹಾಲುಮತ ಮಹಾಸಭಾದಿಂದ ಸನ್ಮಾನ


ಸಂಡೂರು, ಸೆ.7: ಹಳೇದರೋಜಿ ಗ್ರಾಮದ ಹೆಸರಾಂತ ಜಾನಪದ ಕಲಾವಿದ ಅಶ್ವ ರಾಮಣ್ಣ ಅವರನ್ನು  ತಾಲೂಕಿನ‌ ವಡ್ಡು ಗ್ರಾಮದಲ್ಲಿ ಹಾಲುಮತ ಮಹಾಸಭಾ ಸಂಡೂರು ತಾಲೂಕು ಅಧ್ಯಕ್ಷರಾದ ಕೆ ಜೆ ಶಿವಕುಮಾರ್ ಸನ್ಮಾನಿಸಿ ಗೌರವಿಸಿದರು.                                             ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ಮತ್ತು  ತಂಡ ವಡ್ಡು ಗ್ರಾಮದಲ್ಲಿ  ಕಳೆದ 15 ದಿನಗಳಿಂದ ತಂಗಿದ್ದಾರೆ. ಈ ದಿನಗಳಲ್ಲಿ ವಿವಿಧ ವೇಷ ಭೂಷಣಗಳ ಮೂಲಕ ರಾಮಾಯಣ, ಮಹಾಭಾರತ ಮತ್ತು ಸಾಮಾಜಿಕ ನಾಟಕಗಳ ರೂಪಕಗಳನ್ನ ಪ್ರತಿ ಮನೆ ಮನೆಗೆ ಪ್ರದರ್ಶನ ನೀಡಿ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನ ತಿಳಿಸುತ್ತಿದ್ದಾರೆ.

  ಇವರ ಕಲಾ ಸೇವೆಯನ್ನು ಗೌರವಿಸಿ ಗ್ರಾಮದ ಮುಖಂಡರೂ ಹಾಲುಮತ ಮಹಾಸಭಾ ಸಂಡೂರು ತಾಲೂಕು ಅಧ್ಯಕ್ಷ ಕೆ ಜೆ ಶಿವಕುಮಾರ್ ಅವರು ಕಲಾವಿದರಿಗೆ ದಾನ ಧರ್ಮ ನೀಡಿ ಸನ್ಮಾನಿಸಿದರು.

Leave a Reply

Your email address will not be published. Required fields are marked *