ಅನುದಿನ ಕವನ-೯೮೪, ಕವಿ: ಮುನಿರಾಜ್ ರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನವಳು..!

ನನ್ನವಳು..!

ಬಳುಕುವ ಬಳ್ಳಿಯೊ
ಅರಳಿ ಮರವೊ
ಆನೆಯೊ ಅರಗಿಣಿಯ
ಅದ್ಯಾವ ಹೋಲಿಕೆ ಇಲ್ಲದ
ಅವಳು… ನನ್ನವಳು..!

ಬಣ್ಣ ಹುಣ್ಣಿಮೆ ಬೆಳಕು
ತೋಳು ಬಾಳೆಯ ದಿಂಡು
ಮಲ್ಲಿಗೆ ಕಣ್ಣು ಸೇಬಿನ ಗಲ್ಲ
ಹಾಲ್ಬೆಳಕು ಬೆಳದಿಂಗಳು
ಇದ್ಯಾವ ಹೋಲಿಕೆ ಇಲ್ಲದ
ಅವಳು… ನನ್ನವಳು..!

ತಾಯಿಯ ಮಮತೆ
ದುಂಬಿಯ ಪ್ರಣಯ
ಸ್ನೇಹಕ್ಕೆ ಗೆಳತಿಯಾಗಿ
ಮಗುವಂತೆ ಸಲಹುವಾ
ಅವಳು… ನನ್ನವಳು..!


✍️ಮುನಿರಾಜ್ ರಾಜ್, ಬೆಂಗಳೂರು
—–

Leave a Reply

Your email address will not be published. Required fields are marked *