ಬಳ್ಳಾರಿ: ಇಂದು ಧೀಮಂತ ಪತ್ರಕರ್ತ ಡಾ.‌ಬಿ ಆರ್ ಅಂಬೇಡ್ಕರ್ ಪುಸ್ತಕ ಬಿಡುಗಡೆ

ಬಳ್ಳಾರಿ, ಜ.30: ಮೈಸೂರಿನ ಪತ್ರಿಕಾ ಅಂಕಣಕಾರ, ಸಾಹಿತಿ ಡಾ.‌ಅಮ್ಮಸಂದ್ರ ಸುರೇಶ್ ಅವರು ರಚಿಸಿರುವ
ಧೀಮಂತ ಪತ್ರಕರ್ತ ಡಾ. ಬಿ. ಆರ್ ಅಂಬೇಡ್ಕರ್ ಕೃತಿ‌ (೨ನೇ ಆವೃತ್ತಿ) ಬಿಡುಗಡೆ ಸಮಾರಂಭ ಜ.30 ರಂದು ಮಂಗಳವಾರ ನಗರದ ಎಸ್ ಎಸ್ ಎ (ಸರಳಾದೇವಿ) ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಜರುಗಲಿದೆ.
ಕಾಲೇಜಿನ ಪತ್ರಿಕೋದ್ಯಮ ವಿಭಾಗ
ಮತ್ತು ಮೈಸೂರಿನ‌ ಸಿರಿ ಸಮೃದ್ಧಿ ಪ್ರಕಾಶನದ ಸಹಯೋಗದಲ್ಲಿ ಬೆ.10-30 ಗಂಟೆಗೆ ನಡೆಯುವ ಸಮಾರಂಭವನ್ನು ವಿಜಯ ಕರ್ನಾಟಕ ಬಳ್ಳಾರಿ ಆವೃತ್ತಿಯ ಸ್ಥಾನಿಕ ಸಂಪಾದಕ ಗಂಗಾಧರ ಬಂಡಿಹಾಳ ಅವರು ಉದ್ಘಾಟಿಸುವರು.
ಹಿರಿಯ ಸಾಹಿತಿ, ಚಿಂತಕ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಕೆ ಮಂಜುನಾಥ್ ರೆಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.


ಕರ್ನಾಟಕ ಬೌದ್ಧ ಸಮಾಜ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಅಧ್ಯಾಪಕ ಕಂಪ್ಲಿಯ ರಮೇಶ್ ಸುಗ್ಗೇನಹಳ್ಳಿ ಅವರು ಕೃತಿ ಪರಿಚಯಿಸುವರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ ಮತ್ತು ಕೃತಿಕಾರ ಡಾ. ಅಮ್ಮಸಂದ್ರ ಸುರೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಡಾ.‌ಅಮ್ಮಸಂದ್ರ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಸಿ.ಮಂಜುನಾಥ್ ಮತ್ತು ಟಿ. ಜಯರಾಂ ಅವರು ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದ್ದಾರೆ.
——

Leave a Reply

Your email address will not be published. Required fields are marked *