ನಾಳೆ‌(ನ.27) ಬಳ್ಳಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ: ಆರೋಗ್ಯಮಾತೆ ಅಮೃತ ಮಹೋತ್ಸವದಲ್ಲಿ ಭಾಗಿ

ಬಳ್ಳಾರಿ,ನ.26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.27 ರಂದು ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.

ನ.27 ರಂದು ಮಧ್ಯಾಹ್ನ 03 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್‌ನ ವಿಮಾನ ನಿಲ್ದಾಣದಿಂದ (ವಿಶೇಷ ವಿಮಾನದ ಮೂಲಕ) ನಿರ್ಗಮಿಸಿ ಸಂಜೆ 3.50 ಕ್ಕೆ ತೋರಣಗಲ್‌ನ ಜಿಂದಾಲ್‌ನ ಏರ್‌ಸ್ಟ್ರಿಪ್ ಗೆ ಆಗಮಿಸುವರು.
ಸಂಜೆ 4 ಗಂಟೆಗೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟ್ರಿಪ್‌ನಿಂದ ಹೊರಟು 4.30 ಗಂಟೆಗೆ ಬಳ್ಳಾರಿ ನಗರದ ಇಂದಿರಾನಗರ ಸಮೀಪದ ಬಳ್ಳಾರಿ ಆರೋಗ್ಯಮಾತೆ ಪುಣ್ಯಕ್ಷೇತ್ರ ಆವರಣದಲ್ಲಿ ಆಯೋಜಿಸಿರುವ ಬಳ್ಳಾರಿ ಆರೋಗ್ಯಮಾತೆ ಅಮೃತ ಸಂಭ್ರಮ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಸಂಜೆ 6 ಗಂಟೆಗೆ ಅಲ್ಲಿಂದ ಹೊರಟು, ಸಂಜೆ 6.30 ಗಂಟೆಗೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟ್ರಿಪ್‌ಗೆ ಆಗಮಿಸಿ 6.40 ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಕೆ.ಚಿರಂಜೀವಿ ಅವರು ತಿಳಿಸಿದ್ದಾರೆ.
——–

Leave a Reply

Your email address will not be published. Required fields are marked *