ಜಾತಿ ಗಣತಿ ಸಮೀಕ್ಷೆಗೆ ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಿಕ್ಷಕಿಯರನ್ನು ನಿಯೋಜಿಸ ಬಾರದು ಎಂದು ಜಿಲ್ಲಾ ಶಿಕ್ಷಕರ ಸಂಘ ಒತ್ತಾಯ: ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ನೇತೃತ್ವದಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಬಳ್ಳಾರಿ, ಏ.2: ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವ ಜಾತಿ ಗಣತಿ ಸಮೀಕ್ಷೆ, ತರಬೇತಿ ಕಾರ್ಯಕ್ಕೆ ನಿವೃತ್ತಿ ಅಂಚಿನಲ್ಲಿರುವ 55 ವರ್ಷದ ಮೇಲ್ಪಟ್ಟ ಹಾಗೂ ಗುರುತರವಾದ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕಿಯರನ್ನು ನಿಯೋಜಿಸ ಬಾರದು ಎಂದು ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಉಪ‌ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ  ಮತ್ತಿತರ ಪದಾಧಿಕಾರಿಗಳು ಜಾತಿ ಗಣತಿಯ ತರಬೇತಿಗೆ, ನಿವೃತ್ತಿ ಹಂಚಿನಲ್ಲಿರುವ (55 ವರ್ಷ ಮೇಲ್ಪಟ್ಟ ಮಹಿಳೆಯರನ್ನು,) ಗುರುತರವಾದ ಕಾಯಿಲೆ ಇರುವ ಶಿಕ್ಷಕರನ್ನು, ಗರ್ಭಿಣಿ ಸ್ತ್ರೀಯರನ್ನು, ಮಾತೃತ್ವ ರಜೆಯ ಮೇಲೆ ತೆರಳಿದ ಶಿಕ್ಷಕರನ್ನು ನಿಯೋಜಿಸ ಬಾರದು ಎಂದು ಒತ್ತಾಯಿಸಿದರು.                                           ಜಾತಿಗಣತಿ ಸಮೀಕ್ಷೆಯ, ಬೂತ್ ಲೆವೆಲ್ ಕೆಲಸ ಮಾಡುವ, ಸರ್ವೆ ಕೆಲಸ ಮಾಡುವ, ಶಿಕ್ಷಕರ ತರಬೇತಿಯನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ. ಈ ಸರ್ವೇ ತರಬೇತಿಗೆ, ನಿವೃತ್ತಿ ಹಂಚಿನಲ್ಲಿರುವ 55 ವರ್ಷ ಮೇಲ್ಪಟ್ಟ ಮಹಿಳೆಯರನ್ನು, ಗುರುತರವಾದ ಕಾಯಿಲೆ ಇರುವ ಶಿಕ್ಷಕರನ್ನು, ಗರ್ಭಿಣಿ ಸ್ತ್ರೀಯರನ್ನು, ಮಾತೃತ್ವ ರಜೆಯ ಮೇಲೆ ತೆರಳಿದ ಶಿಕ್ಷಕರನ್ನು, ಹೊರತುಪಡಿಸಿ, ಹಾಗೂ ಗಣತಿ ಕಾರ್ಯದಲ್ಲಿ ತೊಡಗಿದ ಶಿಕ್ಷಕರಿಗೆ ಸರ್ಕಾರದಿಂದ ದೊರೆಯಬಹುದಾದ ಗೌರವದನ, ಗಳಿಕೆ ರಜ, ಹಾಗೂ ಅವರಿಗೆ, ಬ್ಯಾಗ್/ಛತ್ರಿ/ಟೋಪಿಯನ್ನು/ನಿರ್ಜಲೀಕರಣ ಆಗದಂತೆ ಗುಲ್ಕೋಸು/ಕುಡಿಯುವ ನೀರಿನ ವ್ಯವಸ್ಥೆ/ ವ್ಯಾಪ್ತಿಯ ವಲಯದ ಶಿಕ್ಷಕರನ್ನು ಅದೇ ವಲಯದ,( ಬೂತ್ ) ಸರ್ವೆ ಕಾರ್ಯಕ್ಕೆ ನಿಯೋಜಿಸ ಬೇಕು ಎಂದು ಮನವಿ ಮಾಡಿದರು.                               ಮನವಿ ಪತ್ರವನ್ನು, ಉಪನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ಇವರಿಗೆ ಜಿಲ್ಲಾ ಮತ್ತು ತಾಲೂಕು ಶಿಕ್ಷಕರ ಸಂಘದಿಂದ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ, ಕಾರ್ಯದರ್ಶಿ ಜಿ ಶಿವಶಂಕರ್, ಖಜಾಂಚಿ ಶೇಕ್ಷವಲಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.