ನೀ ಋತುವಿನಂತೆ
ತಾಕಿ ಹೋದ ನಂತರವೂ ಕೂಡ
ಕಣ್ಣ ಪಸೆಯಲ್ಲಿ
ಸುನಾಮಿಯಂತ
ಕಂಬನಿಯೊಂದು
ಅಲೆಯಂತೆ ಅಪ್ಪಳಿಸುತ್ತಲೇ ಇದೇ.
ಸಾವಿರ ಅಲೆಗಳು ಬಂದು
ಎದೆ ತಾಕಿದರೂ
ನಿನ್ನ ಮಾತುಗಳೆಲ್ಲ
ಮೋಡವಾಗಿ ಮೈ ಮೇಲೆ
ಇಳಿದಂತಾಗಿ
ಪ್ರತಿ ಮುಂಗಾರಿಗೂ ಮೈ ಒಡ್ದುತ್ತೇನೆ.
ಒಮ್ಮೊಮ್ಮೆ
ಚಂಡ ಮಾರುತದಷ್ಟು
ತೀವ್ರವಾಗಿ ನಿನ್ನ ನೆನಪುಗಳು
ನನ್ನೆದೆಗೆ ಅಪ್ಪಳಿಸುತ್ತವೆ.
ಲೆಕ್ಕಕ್ಕೆ ಸಿಗದ ಬಡಿತಗಳು
ನತದೃಷ್ಟ ಮುಂಜಾವಿಗೆ ದೀಪ ಬೆಳಗುತ್ತವೆ.
ಮತ್ತೊಮ್ಮೆ
ಋತುವಿನಂತೆ ತಾಕಿ ಹೋಗು
ಚೈತ್ರ ಚಿಗುರುವ ಕಾಲ
ಮತ್ತೆ ಬಂದರೂ ಬರಬಹುದು.
ಅಘಟಿತ ಕನಸೊಂದು
ನನಸಾಗಲಿ ಎಂಬ ಹಂಬಲದಲ್ಲಿ
ಇತಿ ನಿನ್ನವಳಲ್ಲ.
-ಮಂಜುಳಾ ಭಾರ್ಗವಿ, ಬೆಂಗಳೂರು