ರಾಯಚೂರು, ಮೇ 15: ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲದಿನ್ನಿ ಗ್ರಾಮದ ಮಲ್ಲಯ್ಯ ಬಾರಕೇರಿ ಪುತ್ರ ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ನಾಯಕ್ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಡಾ.ಜೆ.ಎ.ಸಿದ್ದಿಕಿ ರವರ ಮಾರ್ಗದರ್ಶದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ”ಯೂಸ್ ಆಫ್ ರಿಸೊಸರ್ಸ್ ಅಂಡ್ ಮ್ಯಾನೇಜ್ಮೆಂಟ್ ಇನ್ ವುಮೆನ್ ಯೂನಿವರ್ಸಿಟಿ ಲೈಬ್ರೆರಿಸ್ ಇನ್ ಸೌಥ್ ಇಂಡಿಯಾ:ಎ ಸ್ಟಡಿ,,ಎಂಬ ಮಹಾಪ್ರಭಂಧಕ್ಕೆ ಚೌಧರಿಯ ಚರಣ್ ಸಿಂಗ್ ವಿಶ್ವವಿದ್ಯಾಲಯವು ಅವರಿಗೆ ಪಿ.ಹೆಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.
ಪ್ರಸ್ತುತ ಅಸೇನಪ್ಪ ನಾಯಕರವರು ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.