ಬೆಂಗಳೂರು, ಮೇ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ.ರವಿ ಅವರಿಗೆ ಪತ್ರಿಕಾ ವೃತ್ತಿಯಲ್ಲಿನ ಜೀವಮಾನದ ಸಾಧನೆ ನೀಡಿ ಸನ್ಮಾನಿಸಿದರು.
ಕರ್ನಾಟಕ ಮಾನ್ಯತೆ ಪಡೆದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಮತ್ತು ಎಮ್ ಸಿದ್ದರಾಜು ಸಂವಹನ ಹಾಗೂ ಸಾಮಾಜಿಕ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಪ್ರೊ. ಬಿ ಕೆ ರವಿ ಮಾಧ್ಯಮ ಕ್ಷೇತ್ರದಲ್ಲಿ 50 ವರ್ಷ ಸೇವೆ ಸಲ್ಲಿಸಿದು ಹಾಗೂ ಮಾಧ್ಯಮ ಶೈಕ್ಷಣಿಕ ರಾಜ್ಯಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ,
ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರೊ.ಬಿ ಕೆ ರವಿ ಅವರು ಸಂಶೋಧಕ ಶಿಕ್ಷಕರಾಗಿದ್ದು, ವಿಮರ್ಶಕ ರಾಗಿದ್ದರು ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ, ದೇಶ ವಿದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಅಧ್ಯಕ್ಷತೆ ವಹಿಸಿದ್ದರು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾಗಿ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಹಿಂದುಳಿದ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಇವರು ಎರಡು ಅವಧಿಗೆ ಹಿಂದುಳಿದ ವರ್ಗಗಳ ರಾಜ್ಯ ಆಯೋಗ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಕರ್ನಾಟಕ ಲಲಿತ ಕಲಾ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದಾರೆ ರಾಷ್ಟ್ರೀಯ ಸಂವಹನ ಕಾಂಗ್ರೆಸ್ ಕಾರ್ಯಗಾರಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಕಲ್ಕತ್ತ ಶಾಂತಿನಿಕೇತನ ಮತ್ತು ಪಂಡಿತ್ ಲಕ್ಷ್ಮಿ ಚಂದ ರಾಜ್ಯ ವಿಶ್ವವಿದ್ಯಾಲಯದ ಪ್ರದರ್ಶನ ಮತ್ತು ದೃಶ್ಯ ಕಲೆಗಳು ರೂಟಕ್ ಹರಿಯಾಣದ ಯೋಜನ ಮಂಡಳಿ ಸದಸ್ಯರಾಗಿ ಹರಿಯಾಣದ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಗಂಧರ್ವ ಸೇನಾ ಅಧ್ಯಕ್ಷರು ಶಿವಪ್ಪ ಕಾರ್ಯದರ್ಶಿ ವಿರೂಪಾಕ್ಷ ಎಚ್ ಜಿ ಪ್ರಧಾನ ಕಾರ್ಯದರ್ಶಿ ಮತ್ತಿತರರಿದ್ದರು.