ಬೆಂಗಳೂರು: ವಿಶ್ರಾಂತ ಎಡಿಜಿಪಿ ಸಮಾಜಮುಖಿ ಡಾ. ಸುಭಾಷ್ ಭರಣಿ ಅವರಿಗೆ ಹೊಸಬೆಳಕು ಸದ್ಭಾವನ ಪ್ರಶಸ್ತಿ ಪ್ರದಾನ ಪ್ರದಾನ ಮಾಡಲಾಯಿತು.
ಹೊಸಬೆಳಕು ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಜಿಗಣಿ ಅವರು ಗುರುವಾರ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ. ಭರಣಿ ಅವರ
75ನೇ ಜನ್ಮದಿನಾಚರಣೆ ಹಾಗೂ ಮೋಹನಾಭರಣಿ ಹಾಗೂ ಡಾ.ಸುಭಾಷ್ ಭರಣಿ ಅವರ 45 ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟ್ ತನ್ನ ಇಪ್ಪತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿತು.
ಹೊಸ ಬೆಳಕು ಟ್ರಸ್ಟ್ ಕತ್ತಲಿನಿಂದ ಬೆಳಕಿನಡೆಗಿನ ಪಯಣದಲ್ಲಿ ಸೇವೆಯನ್ನು ಜನರಿಗೆ ತಲುಪಿಸಲು ಬೆನ್ನೆಲುಬಾಗಿ ನಿಂತಂತ ಸಾಧಕರಿಗೆ ಹೊಸಬೆಳಕು ಸದ್ಭಾವನಾ ಪ್ರಶಸ್ತಿ 2025 ಯನ್ನು ಸಾಧಕರ ಮನೆಬಾಗಿಲಲ್ಲೇ ನೀಡಲು ನಿರ್ಧರಿಸಿದೆ ಎಂದು ರಾಮಕೃಷ್ಣ ಜಿಗಣಿ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.
ಭರಣಿ ಅವರು 20 ವರ್ಷಗಳ ಕಾಲ ಒಂದು ಟ್ರಸ್ಟನ್ನು ನಿಸ್ವಾರ್ಥತೆಯಿಂದ ನಡೆಸುತ್ತಿರುವುದು ಅಭಿನಂದನಾರ್ಹ ಎಂದರು.
ಅಂಧತ್ವ ನಿವಾರಣೆ, ಆರೋಗ್ಯ ಶಿಬಿರ,ರಕ್ತದಾನ,ನೇತ್ರದಾದಾನ, ಅಂಗಾಂಗ ದಾನ ಸೇವೆ ಮಾಡುತ್ತಾ ಬಂದಿರುವುದು ತುಂಬಾ ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹತ್ತು ವರ್ಷದ ಹಿಂದೆ ತಾವು ಇವರ ಸೇವೆಗೆ ಕೈ ಜೋಡಿಸಿ 50 ಕನ್ನಡಕಗಳನ್ನು ನೀಡಿದ್ದನ್ನು ಸ್ಮರಿಸಿದರು. ಮುಂದೆಯೂ ಸಹಕಾರ ಇರುತ್ತದೆ. ಹೊಸಬೆಳಕು ಟ್ರಸ್ಟ್ ತನ್ನ ಕಾಯಕ ಮುಂದುವರೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಶ್ರೀಮತಿ ಮೋಹನ ಭರಣಿ ಭರಣಿ ನ್ಯೂಸ್ ಸಂಪಾದಕ ಶಿವರಾಜ್ ಭರಣಿ, ಮುನಿರಾಮು, ಮಂಜುಳಾ ಸರಸ್ವತಿ ಮತ್ತಿತರರು ಇದ್ದರು.
——