ನೋವು
ನೂರು ಆಸೆಗಳ ನೂಕಿ ಬಂದು ಬಿಡು ಎದೆಯ ಕದ ತೆರೆದಿರುವೆ
ಸಾವಿರ ಸವಾಲು ಬಂದರು ಹೆದರದೆ ಬಂದು ಬಿಡು ಕಾದಿರುವೆ
ಮನದ ನೋವಿಗೆ ಸಾಂತ್ವನದ
ನುಡಿ ಬೇಕಿಲ್ಲವೆಂದು ನಂಬಿರುವೆ
ಹೊಸಕುವ ಕೈಗಳು ಹೆಚ್ಚಾಗಿವೆ ಇಲ್ಲಿ
ಎಂದು ನಾನು ಅರಿತಿರುವೆ
ಹೃದಯದ ಗಾಯಕೆ ಕೊಲು ಚುಚ್ಚಿ ನೋವು ತರುವರನ್ನು ನೋಡಿರುವೆ
ಯಾಕಾದರೂ ನಾವು ಇಲ್ಲಿ ಮಿಲನ
ಗೊಂಡಿದ್ದೇವೆ ಎಂದು ನೊಂದಿರುವೆ
ಉರಿವ ಗಾಯ ಮಾಯುವ ಮುನ್ನ
ಹೃದಯಕೆ ಭರ್ಚಿ ತಿವಿದಿದ್ದು ಕಂಡಿರುವೆ
ಇಲ್ಲಿ ಹಗೆತನ ಬಿತ್ತಿ ಬೆಳೆವವರ ಕಂಡು
ಮನಸಿನಲ್ಲಿ ಘಾಸಿಗೊಂಡಿರುವೆ
-ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ