ಅನುದಿನ ಕವನ-೧೬೧೩, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ

ಮುಂಜಾವಿನಲಿ
ಅಂತರಂಗದ ಕದ ತೆರೆಯಲು
ಮನದ ಮೈಗೆ ತಾಗಿದ ಬಿಸಿಗಾಳಿಯಲೇ
ನಿನ್ನುಸಿರ ಕಲರವ ಕಂಡು ಬಾಗಿಲ ಮುಚ್ಚಿದೆ
ತೂರಿ ಹೊಗದಂತೆ, ಒಡಲ ತುಂಬಿಕೊಳಲು.

ಹೃದಯ ಗೂಡನು ಜಾಡಿಸಿ ಗುಡಿಸುವಾಗ
ಕಂಡ ಹೆಜ್ಜೆಯ ಗುರುತುಗಳು
ನಿನ್ನವೆಂದು ಅರಿತಾದ ಮೇಲೆ
ಗುಡಿಸದೇ ಶೃಂಗರಿಸಿ ಕಾದಿರುವೆ
ಯಾರೂ ತುಳಿಯದಂತೆ.

ಇರುಳೆಲ್ಲಾ ನೀ ನಡೆದ
ಎದೆ ಭೂಮಿಯಲಿ
ನೆನಪುಗಳ ಮೆರೆವಣಿಗೆ ಅನುರಣನ
ಮೂಲೆ ಮೂಲೆಯಲು ಚೈತ್ಯನ್ಯದ ನರ್ತನ
ನರ್ತಿಸುತಿರಲಿ ಸದಾ ಸ್ಪೂರ್ತಿಯಾಗಿರುವೆ..


-ಡಾ. ಭಾರತಿ ಅಶೋಕ್, ಹೊಸಪೇಟೆ

Leave a Reply

Your email address will not be published. Required fields are marked *