ಧೋ ಎಂದು ಸುರಿದು
ನಿಂತು ಬಿಡುವ ನೀನು ಆಗಾಗ
ನೆನಪಾಗುವ ಅಮರ ಪ್ರೇಮಿಯೇ ಸರಿ
ಆದರೂ
ಸದಾ ಸುರಿಯುತ್ತಿರು
ಒಲವ ಎದೆಗಾನಿಸಿಕೊಂಡು ಜೊತೆ
ನಡೆವ ಪ್ರೇಮ ಯೋಗಿಯಂತೆ
ನೀನ್ಹೀಗೆ ಬಂದು ಬಂದೆಯೋ ಇಲ್ಲವೋ
ಎನ್ನುವ ನೆನಪು ಇರದ ಹಾಗೆ ಬರುವುದು
ಹೋಗುವುದು ನನಗಾಗದು
ಹೇಳಿದೆನಲ್ಲ
ಬರುವುದಾದರೆ ಬಂದು ಸದಾ
ವಿರಹದುರಿಯ ತಣಿಸುತ್ತಿರು
ಮತ್ತೆಂದೂ ‘ವಿರಹ’ ಕಾಡದಂತೆ
-ಡಾ. ಭಾರತಿ ಅಶೋಕ್, ಹೊಸಪೇಟೆ
—–