ಬಾಕಿ – ಚುಕ್ತ
ನೋವುಗಳನ್ನು ನಾನು
ಮರೆತರೂ – ಮರೆತಿಲ್ಲ ನೋವುಗಳು
ಇನ್ನೂ ನನ್ನ !
ಒಮ್ಮೆ
ಕನಸಿನಲಿ ಮತ್ತೊಮ್ಮೆ ಕನವರಿಕೆ
ಯಲಿ ಮಗದೊಮ್ಮೆ ಬಿಕ್ಕಳಿಕೆಯಲಿ
ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ
ಗೊತ್ತು ಗುರಿಯಿರದ ತಬ್ಬಿಬ್ಬಿನಲಿ
ಬಾರಿನ ಮೂಲೆಯ ಆ ಮಬ್ಬಿನಲಿ
ಪಾಪ ! ನೆನಪುಗಳೂ ಪರದೇಸಿ
ನನ್ನಂತೆ
ನಾನಲ್ಲದೆ ಇನ್ನಾರು ಗತಿ ಅವಕೆ ?
ಅವು ಬಂದಾಗ
ನೆನಪು ನೇವರಿಸಿ ತಬ್ಬಿ
ಮುದ್ದಾಡಿ ಕಣ್ಣೀರು ಕರಗಿ ಮತ್ತೆ
ಹೊಸಬನಾಗುತ್ತೇನೆ ಪ್ಲೀಜ್ ನೀವು ನಂಬಿ
ಕೇಳಿ ಬಂದವರು
ಇಲ್ಲಿ
ಕೊಟ್ಟೂ ಹಗುರಾಗುತ್ತಾರೆ
ಪಡೆದವನ ಭಾಗ್ಯ ಕೊಟ್ಟವನ ಋಣದಲ್ಲಿ
ಲೆಕ್ಕ ಚುಕ್ತಾ ಆಗುವುದೆಂದರೆ ಹೀಗೆ !
-ಎಲ್ವಿ(ಡಾ. ಲಕ್ಷ್ಮಣ ವಿ.ಎ) ಬೆಂಗಳೂರು
—–