ಅಡವಿಟ್ಟಿರುವನು ಅವಳ ಪಾದದಲ್ಲಿ
ಮಾರಿ ಕೊಳ್ಳಲು ನಿಂತಿರುವಳು ಸಂತೆಯಲ್ಲಿ
ಮಂದಿ ನೆರೆದಿರುವರು ಕಾತರದಲ್ಲಿ
ಕಣ್ಣಂಚಿನ ಮಿಂಚಿಗೆ
ತುಟಿಗಲ್ಲಗಳ ಸಂಚಿಗೆ
ಎದೆಭಾರ ಕಣಿವೆ ಕಾನನ
ಹಳ್ಳ ದಿಣ್ಣೆ ಇಳಿಜಾರುಗಳಿಗೆ
ಇಂತಿಷ್ಟೇ ಎಂದು ಗಟ್ಟಿಸಿ
ಹೇಳುತ್ತಿರುವಳು ವಯ್ಯಾರದಲ್ಲಿ
ಅರೆ! ಕುಡಿನೋಟಕ್ಕೆ ಹುಚ್ಚಾಗಿ
ಎಂಟೆದೆಯ ಭಿಕಾರಿಯೊಬ್ಬ ತನ್ನನ್ನೇ ಅಡವಿಟ್ಟಿರುವನು
ಅವಳ ಪಾದದಲ್ಲಿ!
-ಸವಿತಾ ನಾಗಭೂಷಣ, ಶಿವಮೊಗ್ಗ
—–