Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಕಾವ್ಯ ಕಹಳೆ, ಕವಿ: ಡಾ.ಸದಾಶಿವ ದೊಡ್ಡಮನಿ, ಇಳಕಲ್ಲು, ಕವನದ ಶೀರ್ಷಿಕೆ: ಜೀವಾ....ಜೀವಾ - Karnataka Kahale

ಕಾವ್ಯ ಕಹಳೆ, ಕವಿ: ಡಾ.ಸದಾಶಿವ ದೊಡ್ಡಮನಿ, ಇಳಕಲ್ಲು, ಕವನದ ಶೀರ್ಷಿಕೆ: ಜೀವಾ….ಜೀವಾ

ದಲಿತ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಡಾ. ಅರ್ಜುನ್ ಗೊಳಸಂಗಿ ಅವರ ಪುತ್ರ,  ಯುವ ಪತ್ರಕರ್ತ ಜೀವನ್ ಗೊಳಸಂಗಿ ಅವರು ಅಕಾಲಿಕವಾಗಿ ವಿಧಿವಶವಾಗಿರುವುದು ಅಘಾತವನ್ನುಂಟು ಮಾಡಿದೆ. ಅದ್ಬುತ ಭವಿಷ್ಯ ಹೊಂದಿದ್ದ ಕನಸುಗಾರ 24ರ ಹರೆಯದ ಜೀವನ್ ಅಗಲಿಕೆ ಎಂತಹವರ ಮನಸು ಕಲಕಿಸುತ್ತದೆ, ದುಃಖತಪ್ತನ್ನಾಗಿಸುತ್ತದೆ. ಡಾ. ಗೊಳಸಂಗಿ ಅವರ ಮತ್ತು ಕುಟುಂಬದ ದುಃಖದಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್, ಕಾವ್ಯ ಕಹಳೆಯು ಭಾಗಿಯಾಗುತ್ತದೆ. ಜೀವನ್ ನನ್ನ ಎತ್ತಿ ಆಡಿಸಿದ  ಕವಿ ಡಾ. ಸದಾಶಿವ ದೊಡ್ಡಮನಿ ಅವರು ದುಂಖ, ನೋವು ತುಂಬಿದ ಅಕ್ಷರದ ಸಾಲುಗಳು ಈ ಕವನ ಓದುವ ಎಲ್ಲರ ಭಾವವೂ ಆಗಿದೆ. ಜೀವಾ….ಜೀವಾ ಕವನ ಪ್ರಕಟಿಸುವುದರ ಮೂಲಕ ಕಾವ್ಯ ಕಹಳೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.

(ಸಂಪಾದಕರು)

ಜೀವಾ…..ಜೀವಾ

ಕೊಟ್ಟಿದ್ಯಾಕೆ?, ಕಸಿದುಕೊಂಡಿದ್ಯಾಕೆ?
ಹೊಟ್ಟೆಯಲ್ಲಿ ಉರಿ ಹಾಕಿ
ವಿಧಿಯೇ, ನೀನು ಮ್ಯಾಲೆ ಗಹ್ಹಗಹ್ಹಿಸಿ ನಗೋದ್ಯಾಕೆ?, ಕರುಳು ಹಿಂಡೋದ್ಯಾಕೆ?

ಜೀವಾ, ಜೀವಾ ಅನ್ನೋ ಜೀವಾ ನುಂಗಿ
ಮಂಗಾಟ ಆಡಿ ಕೊಣಿಯೋದ್ಯಾಕೆ?
ಬ್ಯಾನಿ ಕೊಡುವುದ್ಯಾಕೆ?
ಭೂಮಿ ಬಗೆದು ಹುಡುಕಾಡಿದರೂ ಜೀವ ಸಿಗದೆ ಹೋದುದ್ಯಾಕೆ?

ಹುಟ್ಟು ಸಾವು, ಮುಷ್ಟಿಯಲ್ಲಿ
ಸುಖ, ದುಃಖ ತುಂಬಿ ಕಳುಹಿದ್ಯಾಕೆ
ಭೃಂಗ ಶೃಂಗ ಏರಿ ಆಡುವಾಗ, ನಲಿದಾಡುವಾಗ
ಕಾರ್ಮೋಡ ಕವಿದಿದ್ದ್ಯಾಕೆ?, ಜೀವಾ ಕಳೆದೋಗಿದ್ಯಾಕೆ?


-ಡಾ. ಸದಾಶಿವ ದೊಡಮನಿ, ಇಳಕಲ್ಲು
——