ಬಳ್ಳಾರಿ: ಭಾರತೀಯ ಕಲಾ ಸಂಪತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮುಂದುವರೆಯಬೇಕು ಎಂದು ನಗರದ ಶ್ರೀ ಪಾಂಡುರಂಗ ದೇವಸ್ಥಾನದ ಕಾರ್ಯದರ್ಶಿ ವೆಂಕೋಬ ರಾವ್ ತೇಳಿಸಿದರು.
ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಶ್ರೀ ಪಾಂಡುರಂಗ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ತುಂಗಾ ಆಷಾಡ ನಾಟ್ಯ ವೈಭವ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಂತರ ಸಮೂಹ ನೃತ್ಯ, ಏಕಪಾತ್ರಾಭಿನಯ, ಸುಗಮ ಸಂಗೀತ, ವಾದ್ಯ ಗೋಷ್ಠಿ, ಭಕ್ತಿಗೀತೆ ಗಾಯನ ಭಕ್ತಾದಿಗಳನ್ನು ರಂಜಿಸಿದವು. ಕಲಾವಿದರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವೆಂಕೋಬರಾವ್, ನೃತ್ಯ ಶಿಕ್ಷಕ ಬಸವರಾಜು, ರಾಮಗಿರಿ ಅವರನ್ನು ಸನ್ಮನಿಸಲಾಯಿತು. ಕಲಾವಿದ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು. ನೃತ್ಯ ಕಲಾವಿದೆ ವಸುಂಧರ ವಂದಿಸಿದರು. ಸಹನ, ಸನ್ನಿಧಿ, ಮನಸ್ವಿತ ಜೋಷಿ, ರಾಧಾಕೃಷ್ಣ, ಶ್ರೀರಾಘವಿ, ಪ್ರವಲ್ಲಿಕ, ಫಲ್ಗುಣಿ, ನಚಿಕೇತ, ಶಿವರುದ್ರಯ್ಯ, ಲಲಿತ, ರಾಘವೇಂದ್ರ ಆಚಾರ್ಯ, ಸೌಮ್ಯ, ಶ್ರೀಮತಿ, ಕವಿತ, ಪರಿಮಳ, ತುಳಸಮ್ಮ, ಜ್ಯೋತಿ ಮುಂತಾದವರು ಇದ್ದರು.
—–