ಅನುದಿನ ಕವನ-೧೬೫೦, ಕವಯಿತ್ರಿ:ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ನೀ ಹಾಗೆ ಹೇಳಬಾರದಿತ್ತು

ನೀ ಹಾಗೆ ಹೇಳಬಾರದಿತ್ತು

ನನ್ನ ಆಂತರ್ಯದ ಚೆಲುವಿಂದ
ನಿನ್ನ ಅಲಂಕರಿಸುವಂತೆ
ನೀ ಹೇಳಬಾರದಿತ್ತು

ನನ್ನ ನೆತ್ತರಿನಿಂದ
ನಿನ್ನ ವರ್ಣಸಿ
ಬರೆಯುವಂತೆ ನೀ
ಪೀಡಿಸಬಾರದಿತ್ತು

ನಾ ಬಾಡಿದರೂ ನೀ
ಮುಡಿಗೇರಿಸಿ ನಗಬಾರದಿತ್ತು

ನನ್ನೀ ಚೆಲುವು
ಒಲವೆಲ್ಲಾ ನಿನ್ನದೆಂದು
ನೀ ಭಾವಿಸಬಾರದಿತ್ತು

ನನಗೂ ಒಂದು ಅಸ್ತಿತ್ವ ಇದೆ
ಎಂದು ನೀ ಅರಿಯದೇ
ಇರಬಾರದಿತ್ತು

ಡಾ. ಭಾರತಿ ಅಶೋಕ್, ಹೊಸಪೇಟೆ