ಅನುದಿನ ಕವನ-೧೬೭೬, ಕವಿ: ಅನಾಮಿಕ, ಕನ್ನಡಕ್ಕೆ: ಮಂಜುಳ ಕಿರುಗಾವಲು, ಮಂಡ್ಯ

ಬಿಳಿ ಕೂದಲಿನ ಚಿಂತೆ ಬಿಟ್ಟುಬಿಡು.
ಕೇವಲ ನಿನ್ನ ಹಣೆಗೆ ಅಂಟಿದ
ಬೊಟ್ಟಿಗೆ ಯಾರಾದರೂ ಮರಳಾಗಬಹುದು….!

ಶರೀರದ ಅಡ್ಡದಿಡ್ಡ ಬೆಳವಣಿಗೆ
ಬಗ್ಗೆ ಚಿಂತಿಸದಿರು..
ಯಾರಾದರೂ ನಿನ್ನ ಹೃದಯ ಸೌಂದರ್ಯಕ್ಕೆ
ಮಂತ್ರ ಮುಗ್ಧರಾಗಬಹುದು..!

ಕೆನ್ನೆ ಮೇಲೆ ಮೂಡುವ ಸುಕ್ಕುಗಳ
ಕುರಿತು ಮರುಗದಿರು…
ಯಾರಾದರೂ ನಿನ್ನ ಮೊಗದಲ್ಲಿ ಮೂಡುವ
ಮಂದಹಾಸಕ್ಕೆ ಶರಣಾಗಬಹುದು..!

ಹೋಗಲಿ ಬಿಡು..
ನಿನಗೆ ಯಾವುದರಲ್ಲಿ ಖುಷಿ ಸಿಗುವುದೋ
ಅದನ್ನೇ ಮಾಡು..
ಯಾರೋ ನಿನ್ನ ಖುಷಿಗಾಗಿ ಕಾತರಿಸಬಹುದು..

-ಅನಾಮಿಕ

ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ