ಮೂಕವಾಗಿವೆ….
ನಾನೇನೂ ಮಾಡಿಲ್ಲ
ಆದರೂ…..
ಇರುವೆ ಕಚ್ಚಿದೆ,
ಬೆಕ್ಕು ಪರಚಿದೆ
ನಾಯಿ ಬೆನ್ನಟ್ಟಿದೆ
ಗೂಳಿ ಗುದ್ದಿದೆ
ಎಮ್ಮೆ ತಿವಿದಿದೆ
ಕತ್ತೆ ಒದ್ದಿದೆ
ಇಂಬಳ ರಕ್ತ ಹೀರಿದೆ
ಚೇಳು ಕಡಿದಿದೆ
ಜೇನು ಕುಟುಕಿದೆ
ಹೇಳಲೇನಿದೆಯೋ
ಅವುಗಳಿಗೆ, ಮೂಕವಾಗಿವೆ !
-ಸವಿತಾ ನಾಗಭೂಷಣ, ಶಿವಮೊಗ್ಗ
—–
ಮೂಕವಾಗಿವೆ….
ನಾನೇನೂ ಮಾಡಿಲ್ಲ
ಆದರೂ…..
ಇರುವೆ ಕಚ್ಚಿದೆ,
ಬೆಕ್ಕು ಪರಚಿದೆ
ನಾಯಿ ಬೆನ್ನಟ್ಟಿದೆ
ಗೂಳಿ ಗುದ್ದಿದೆ
ಎಮ್ಮೆ ತಿವಿದಿದೆ
ಕತ್ತೆ ಒದ್ದಿದೆ
ಇಂಬಳ ರಕ್ತ ಹೀರಿದೆ
ಚೇಳು ಕಡಿದಿದೆ
ಜೇನು ಕುಟುಕಿದೆ
ಹೇಳಲೇನಿದೆಯೋ
ಅವುಗಳಿಗೆ, ಮೂಕವಾಗಿವೆ !
-ಸವಿತಾ ನಾಗಭೂಷಣ, ಶಿವಮೊಗ್ಗ
—–