ಸ್ನೇಹ ಸಂಬಂಧ
ಸ್ಪಟಿಕದ ಹರಳಂತೆ ಸ್ನೇಹ ಸಂಬಂಧ
ಕಲ್ಮಶವೆ ಇರದ ಮನಸೇ ಅಂದ
ಅಂತರಂಗವನು ತೆರೆದಿಡುವ ಭಾವ ಬಂಧ
ದ್ವೇಷ ಅಸೂಯೆಗಳಿರದ ಮೈತ್ರಿ ಬಂಧ/
ಕಷ್ಟಕ್ಕೆ ಮಿಡಿಯುವ ಹೃದಯವಂತಿಕೆ ಗೆಳೆತನ
ಆಪತ್ತಿನಲಿ ಕಾಯುವುದು ನೇಹಿಗನ ಮನ
ಗೌಪ್ಯತೆಯ ಬಚ್ಚಿಡುವ ಖಜಾನೆ ಈ ಹೃನ್ಮನ
ಮನ ಹಗುರಾಗಿಸುವ ದಿವ್ಯ ಪ್ರವಚನ/
ಎಲ್ಲಿಯೋ ಹುಟ್ಟಿ ಯಲ್ಲಿಯೋ ಬೆಳೆದು
ಎಲ್ಲಿಯೋ ಬೆಸೆಯುವ ಕೊಂಡಿ ಈ ಬಂಧ
ಬಾಲ್ಯವೋ ಯವ್ವನವೋ ಮುಪ್ಪೋ ಸಂಗಮವಾಗಿಸಿ
ತೆರೆದ ಪುಟವಾಗುವುದು ಭಾವಗಳ ವೃಂದ/
ಮನ ಹಗುರಾಗಲು ಬೇಕು ಸಂಬಂಧಕ್ಕಿಂತ
ಮಿಗಿಲಾದ ಗೆಳೆತನದ ಸಾಂಗತ್ಯ
ಕಟ್ಟುಪಾಡುಗಳಿರದೆ ಚೇತನವ ತುಂಬುವ ದಿವ್ಯ ಔಷಧವೀ ಗೆಣೆಕಾರನ ಆತಿಥ್ಯ//ಗೊ
-ಗೊರೂರು ಜಮುನ, ಬೆಂಗಳೂರು