ಅನುದಿನ ಕವನ-೧೬೮೮, ಯುವ ಕವಿ:✍️ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ,  ಚಿತ್ರದುರ್ಗ, ಕವನದ ಶೀರ್ಷಿಕೆ:ಇಲ್ಲಿ ಕೇಳು ಗೆಳೆಯ..

ಇಲ್ಲಿ ಕೇಳು ಗೆಳೆಯ..

ಜೋರುಮಳೆಯಾಗಿ ನೀನು ಒಮ್ಮೆಲೆ ಅಬ್ಬರಿಸಿ
ತಣ್ಣಗಾಗ ಬೇಡ
ಜಿಟಿ ಜಿಟಿ ಹನಿಯಂತೆ ಸುರಿದು
ತೇವ ಕಾಯುವ ಜಡಿಯಂತಾಗು

ಮೊದಲು ಮುತ್ತಿಡುತ್ತಲೆ ಮುಂದುವರೆಯ ಬೇಕು
ಮೈಯೆಲ್ಲಾ ಹಣ್ಣಾಗಿ ಮೆತ್ತಗಾಗುವ ಮೊದಲು
ಈಗತಾನೆ ಮಾಗಿದ ತುಟಿಗಳ ರುಚಿಸವಿಯಬೇಕು

ಕತ್ತಲ ಕೋಣೆಗೆ ಯಾವ ದೀಪವು ಬೇಡ
ಕಿಟಕಿ ಇಣುಕಿ ನೋಡುವ
ಚಂದಿರನ ಬೆಳಕು ಕೂಡ
ವಿರಹದ ಕಾವಿಗೆ ಈಗಾ ಇಬ್ಬರು ಕಾದಿದ್ದೇವೆ
ಇನ್ನು ಒತ್ತಿಉರಿಯಲು ತಡವೇನಿಲ್ಲ

ಮುಡಿದ ಮಲ್ಲಿಗೆಯ ಘಮ
ನಿನ್ನರಿವಿಗೆ ಬಾರದೆ ಇರಬಹುದು
ನನ್ನ ನೀಳಕೊರಳಿಗೆ ಅಂಟಿಕೊಂಡ ಎರೆಳುಗಳ ಸಿಕ್ಕ ಬಿಡಿಸುವ ನೆಪದಿ ನೀ ಸೆರಗ ಸರಿಸಿದಾಗ ನಿನಗೆ ಮತ್ತೇರುವುದು ಖಚಿತ

ಮೊದಲೆ ಹೇಳುವೆ ಕೇಳು
ಬೆನ್ನ ಹಿಂದೆ ಮಚ್ಚೆ ಇದೆ
ಹಣ್ಣೆಂದು ಕಚ್ಚಿ ಬಿಡಬೇಡ
ನಿನ್ನ ಕಂಗಳಲಿ ಹೀಗಾಗಲೆ
ಅಮಲು ತುಂಬಿದೆ

ಬೆರಗಾಗ ಬೇಡ
ಕೊಂಚ ಕೊಬ್ಬಿದ ಮೈ‌ ನನ್ನದು
ನೀನೀಗ ಮಿಂದು ಮುಳುಗಿರುವುದು
ನನ್ನ ಬೆವರ ಮಳೆಯಲ್ಲೆ
ಸಂಶಯವಿದ್ದರೆ ಕೈಚಾಚಿ ನೋಡು
ನನ್ನಂತೆಯೆ ಬೊಗಸೆಯಲ್ಲು
ಭೋರ್ಗರೆಯುತ್ತದೆ

ಹೆಚ್ಚಿಸಿ ಎದೆ ಭಾರ
ನಯವಾಗಿ ನಡುವ ತಂತಿಯ ಮೀಟಿ
ಮಧ್ಯದಲ್ಲಿ ಮೌನ ತಾಳ ಬೇಡ
ದಣಿದ ನಮ್ಮ ನಿಟ್ಟುಸಿರ ಕೂಗು
ಯಾರಿಗಾದರು ಕೇಳಿದರೆ
ನಾಳೆ ಊರಿನಲ್ಲಿ ಸುದ್ದಿ ನಮ್ಮದೆ ಆಗಿಬಿಡುತ್ತದೆ…


-ತರುಣ್ ಎಂ ಆಂತರ್ಯ✍️, ಟಿ.ನಾಗೇನಹಳ್ಳಿ,  ಚಿತ್ರದುರ್ಗ