ಅನುದಿನ ಕವನ-೧೬೯೧, ಕವಯಿತ್ರಿ: ✍️ ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ: ತನಗಗಳು

ತನಗಗಳು

ಅಳೆಯಲಾಗದೆಂದೂ
ಶರಧಿ ಒಡಲನು
ಹಿಡಿಯಲು ಆಗದು
ಮುಗಿಲಿನ ಬಿಲ್ಲನು

ಬಾನ ತಾರೆಗಳಲಿ
ಚಿತ್ತಾರದ ಸೊಬಗು
ಕಂಗಳ ಬಿಂಬದಲಿ
ಸೆಳೆವುದು ಹೊಳಪು

ಅನುರಾಗ ಮೂಡಲು
ಜಗದ ಭಯವಿಲ್ಲ
ಕಡಿವಾಣ ಹಾಕಲು
ಮನಸು ಒಪ್ಪದಲ್ಲ

ನುಡಿಯಲಿ ಮೆರುಗು
ತೊರೆವುದು ಮಸುಕು
ನೀಗುವುದು ಕೊರಗು
ಸರಿಯಲು ಬಿಸುಪು

ಫಲವ ನೀಡಿದರೆ
ಕಂಡ ಕನಸುಗಳು
ಬಾಳಿನ ಯಾನದಲಿ
ದುಗುಡ ಸರಿವುವು


-✍️ ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು
—–