ಸಾಲು ಸಾಲು …
ಪ್ರೀತಿಗೆ ಯಾವ ಜಾತಿಯೂ
ಬೇಡ ಎನ್ನುವ ನಾವುಗಳೇ
ಕೆಲವೊಮ್ಮೆ ನಮ್ಮ ಹೃದಯವನ್ನು
ಸಂಪ್ರದಾಯಗಳ ತೀರದಲ್ಲಿ
ಮುಳುಗಿಸಿ ನೀರು ಕುಡಿಸುತ್ತಿರುತ್ತೇವೆ.
ಕೆಲವೊಮ್ಮೆ ಹಾಳೆಗಳಲ್ಲಿ ಬಿಡಿಸುವ
ರೇಖೆಗಳನ್ನು ನಮ್ಮ ಉಸಿರಿನ ಮೇಲೆ
ಎಳೆದುಕೊಂಡಿರುತ್ತೇವೆ..
ಇಂದಿಗೂ ನಮ್ಮ ಒಲವನ್ನು
ಜಾತಿ- ಧರ್ಮಗಳೇ ಆಳುತ್ತಿದ್ದರೆ
ಅಸ್ಪೃಶ್ಯತೆಯ ಆಚರಿಸುವ ದಣಿಯೂ
ನಮ್ಮೊಳಗೇ ಉಸಿರಾಡುತ್ತಿರುತ್ತಾನೆ
ನಾವು ಪ್ರೀತಿಸಬೇಕಾಗಿದೆ
ಪವಿತ್ರರಾಗಲಿಕ್ಕಲ್ಲ… ನಮ್ಮೊಳಗಿನ
ಒಲುಮೆಯ ಗಾಯವ ಅಪ್ಪಿಕೊಳ್ಳಲಿಕ್ಕೆ
ಮಾನವೀಯತೆಯನ್ನು ಒಪ್ಪಿಕೊಳ್ಳಲಿಕ್ಕೆ…

-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು
—–
