ಅನುದಿನ‌ ಕವನ-೧೭೭೬, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಯುದ್ಧ!!?

ಯುದ್ದ!!?

ಒಲವಯುದ್ದವೋ…?
ವಿರಾಮವೋ..?
ಸಂಧಾನವೋ..?
ಆತ್ಮಾನುಬಂಧವೋ…?
ಅದ್ಯಾವುದರ ಸೆಳೆತವೋ‌ ಕಾಣೆ ನಾ?!!
ಒಲವಲಿ‌ ಮಿಂದೇಳುವ ಘಳಿಗೆಯಲಿ…
ನನ್ನೊಳಗೆ ನೀನೋ…!?
ನಿನ್ನೊಳಗೆ ನಾನೋ!!?
ಏನೆಂದೂ ಅರಿಯೆ ನಾ.!.
ಸೋತದ್ದು ನಾನೋ…
ಗೆದ್ದದ್ದು ನೀನೋ…!?
ಅಥವಾ ಸೋಲು ಗೆಲುವುಗಳ
ಮೀರಿದ ಭಾವದ ಯುದ್ದದಲಿ
ಇಬ್ಬರೂ ಬದ್ಧರಾಗಿ..
ಸೃಷ್ಟಿಯ ಸಂಚಯಕೆ ಅನುವಾಗುತ್ತ
ಆಸೆಗಳ ಬಿಡದ..
ಸಮರಸದ ವೃಕ್ಷದಡಿಯಲಿ
ಒಲವಿನ
ಜ್ಞಾನೋದಯ ಹೊಂದಿದ
‘ಬುದ್ದ’ರಾದೆವೇನೋ
ಅರಿತು ನೋಡೊಮ್ಮೆ!!!?

ಇಂತಿ ನಿನ್ನೊಲವು.

-ಶಾಂತಾ ಪಾಟೀಲ್, ಸಿಂಧನೂರು
—–