ಬಳ್ಳಾರಿ: 13ನೇ ವಾರ್ಡಿನಲ್ಲಿ ಕಿಚನ್ ಕಿಟ್ ವಿತರಿಸಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ನ.12: ಮನೆ ಮನೆಗೂ ಭರತ್ – ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಶಾಸಕ ನಾರಾ ಭರತ್ ರೆಡ್ಡಿಯವರು ಬುಧವಾರ ನಗರದ 13ನೇ ವಾರ್ಡಿನ ಮಿಲ್ಲರ್ ಪೇಟೆ ಮತ್ತಿತರ ಪ್ರದೇಶಗಳಲ್ಲಿ ತಮ್ಮ ಜನ್ಮ ದಿನದ ನಿಮಿತ್ಯ ಕಿಚನ್ ಕಿಟ್ ವಿತರಿಸಿದರು.

ಈ ಸಂದರ್ಭ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಏರ್ಪಡಿಸಿದ್ದ ಆಯ್ದ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.

ಬಳಿಕ ಮನೆ ಮನೆಗೆ ತೆರಳಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಥಿಯೇಟರ್ ಶಿವು, ರಾಕಿ, ಕಪ್ಪೆ ಶಿವು, ತಬ್ರೇಜ್, ಕವಿತಾ, ಕೀರ್ತಿಕುಮಾರ್, ಮಾಜಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸ, ನೂರ್ ಮೊಹಮ್ಮದ್, ಪಿ.ಗಾದೆಪ್ಪ, ಜಬ್ಬಾರ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಮುಖಂಡರಾದ ಚಾನಾಳ್ ಶೇಖರ್, ಗೌತಮ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *