ಜೀವ ಉಳಿಸುವ
ಒಂದು ಗುಟುಕು
ದಾಹ ತೀರಿಸುವ
ಒಂದು ಹನಿ
ಮುಳುಗಲೀಯದೆ ತೇಲಿಸುವ
ಆ ಒಂದು ಹುಲ್ಲು ಕಡ್ಡಿ
ಸುಳ್ಳಾದರೂ ಸರಿಯೇ ಒಂದೇ
ಒಂದು ಮಾತು ಕೊಡು
ಬಿಗಿಯಾಗಬೇಕು ಬಂಧ
ಒಂದು ನೂಲು ಕೊಡು
ಗೂಡ ನೇಯಬೇಕು
ಅದರೊಳಗು ಬೆಳಗಬೇಕು
ನಿನ್ನ ಕಣ್ಣಮಿಂಚ
ಒಂದು ಕ್ಷಣ ಕಡಕೊಡು

-ಕಾವ್ಯಶ್ರೀ, ಬೆಂಗಳೂರು
ಜೀವ ಉಳಿಸುವ
ಒಂದು ಗುಟುಕು
ದಾಹ ತೀರಿಸುವ
ಒಂದು ಹನಿ
ಮುಳುಗಲೀಯದೆ ತೇಲಿಸುವ
ಆ ಒಂದು ಹುಲ್ಲು ಕಡ್ಡಿ
ಸುಳ್ಳಾದರೂ ಸರಿಯೇ ಒಂದೇ
ಒಂದು ಮಾತು ಕೊಡು
ಬಿಗಿಯಾಗಬೇಕು ಬಂಧ
ಒಂದು ನೂಲು ಕೊಡು
ಗೂಡ ನೇಯಬೇಕು
ಅದರೊಳಗು ಬೆಳಗಬೇಕು
ನಿನ್ನ ಕಣ್ಣಮಿಂಚ
ಒಂದು ಕ್ಷಣ ಕಡಕೊಡು

-ಕಾವ್ಯಶ್ರೀ, ಬೆಂಗಳೂರು