ಬಳ್ಳಾರಿ ರೈಲು ನಿಲ್ದಾಣದಲ್ಲಿ ‘ಸ್ಟೇಷನ್’ ಮಹೋತ್ಸವ

ಬಳ್ಳಾರಿ, ಡಿ.5: ನೂರೈವತ್ತು ವರ್ಷಗಳ ಇತಿಹಾಸ ಇರುವ
ಬಳ್ಳಾರಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ  ಶುಕ್ರವಾರ ಸ್ಟೇಷನ್ ಮಹೋತ್ಸವ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆಎಂ ಮಹೇಶ್ವರ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು  ಸಮಿತಿಯ ಪದಾಧಿಕಾರಿಗಳಾದ ಪಿ ಬಂಡೇಗೌಡ, ವಿ ಎಸ್ ಮರಿದೇವಯ್ಯ, ಕೋಳೂರು ಚಂದ್ರಶೇಖರ್ ಗೌಡ, ಮಧುಸೂಧನ ಗೌಡ ಹಾಗೂ ಡಿ ಆರ್ ಯು ಸಿ ಸದಸ್ಯರುಗಳಾದ ಗೋಪಾಲ್ ಕೃಷ್ಣ , ಸೋಂತಾ ಗಿರಿದರ ರಾಹುಲ್,  ಕೆ ಎಂ ಕೊಟ್ರೇಶ್ ಭಾಗವಹಿಸಿದ್ದರು

ಬಳ್ಳಾರಿ ರೈಲ್ವೆ ನಿಲ್ದಾಣದ ಅಧಿಕಾರಿಗಳಾದ ಹೊನ್ನೂರ್ ಸ್ವಾಮಿ,  ಆರ್ ಪಿ ಎಫ್ ಪೊಲೀಸ್ ಅಧಿಕಾರಿ ಸಿದ್ದಲಿಂಗಪ್ಪ ಅವರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಂ ಮಹೇಶ್ವರ ಸ್ವಾಮಿ ಅವರು 150 ವರ್ಷಗಳ ಪಾರಂಪರಿಕ ಕಟ್ಟಡ ಹೊಂದಿರುವ ಬಳ್ಳಾರಿ ರೈಲ್ವೆ ನಿಲ್ದಾಣದ ಮಹತ್ವವನ್ನು ವಿವರಿಸುತ್ತಾ,  ದೇಶದ ಕ್ಲೋಸ್ಡ್ ನಾಲ್ಕು ರೈಲು ನಿಲ್ದಾಣಗಳಾದ ಚೆನ್ನೈ,  ಹೌರ, ಮುಂಬೈ ವಿಟಿ ಸ್ಟೇಷನ್ ಸಾಲಿಗೆ ಬಳ್ಳಾರಿ ನಿಲ್ದಾಣ ಒಂದಾಗಿರುವುದು ಬಳ್ಳಾರಿಗರ ಹೆಮ್ಮೆ ಎಂದರು.
ಮುಂದಿನ ನಾಲ್ಕು ತಿಂಗಳೊಳಗೆ ಬಳ್ಳಾರಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಬೇಕೆಂದು ರೈಲು ಇಲಾಖೆಯನ್ನು ಒತ್ತಾಯಿಸಿದರು
1. 10. 1921ರಂದು ಈ ಪಾರಂಪರಿಕ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಗಾಂಧೀಜಿಯವರು ರಾತ್ರಿ ಇಡೀ ತಂದಿರುವ ವಿಷಯವನ್ನು ಸಭೆಯಲ್ಲಿ ಭಾಗವಹಿಸಿದ ಎಸ್‌ಜೆಟಿ ವಿದ್ಯಾರ್ಥಿಗಳಿಗೆ ತಿಳಿಸಿದರು
ಡಿಆರ್ ಯು ಸಿ ಸಿ ಸದಸ್ಯ ಗಿರಿಧರ ಹಾಗೂ ಇತರರು ಸಭೆಯಲ್ಲಿ ಮಾತನಾಡಿದರು.


ವಿದ್ಯಾರ್ಥಿಗಳಾದ ತನುಶ್ರೀ ಸೃಷ್ಟಿ ಹಾಗೂ ಅಭಿನಂದನ್ ಸಭೆಯಲ್ಲಿ ಪಾರಂಪರಿಕ ರೈಲ್ವೆ ನಿಲ್ದಾಣದ ಬಗ್ಗೆ ಮಾತನಾಡಿದರು
ಸಭೆಯ ನಂತರ ರೈಲ್ವೆ ಅಧಿಕಾರಿ ಹೊನ್ನೂರ್ ಸ್ವಾಮಿ ಅವರು ವಿದ್ಯಾರ್ಥಿಗಳಿಗೆ ರೈಲ್ವೆ ನಿಲ್ದಾಣದ ವೀಕ್ಷಣೆ ಹಾಗೂ ಪರಿಚಯ ಮಾಡಿಕೊಟ್ಟರು