ಬಳ್ಳಾರಿ, ಡಿ.4: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಮಾಜಿ ಡಿಸಿಎಂ, ಹಾಲಿಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಸ್ಥಾನದ ಹುದ್ದೆಗೆ ಪರಿಗಣಿಸಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸಿ. ಶಿವಕುಮರ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಮಾತನಾಡಿದರು. ಸುದೀರ್ಘ ರಾಜಕೀಯ ಅನುಭವ ಹೊಂದಿರುವ .ಡಾ. ಜಿ. ಪರಮೇಶ್ವರ್ ಅವರು ಸತತ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಏರುವ ಅವಕಾಶ ಹಲವು ಬಾರಿ ತಪ್ಪಿ ಹೋಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ನಿರ್ಲಕ್ಷ್ಯ ತೋರಬಾರದು ಎಂದು ಹೇಳಿದರು. ಪರಿಶಿಷ್ಟ ಜಾತಿಯ ಛಲವಾದಿ ಬಲಗೈ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಪಕ್ಷಕ್ಕೆ ನೀಡಿದೆ. ಸಮುದಾಯವು ಕಾಂಗ್ರೆಸ್ ಬೆನ್ನೆಲುಬಾಗಿ ನಿಂತಿದೆ. ಸಮುದಾಯದ ನಾಯಕರಿಗೆ ಪಕ್ಷದ ಸ್ಥಾನಮಾನಗಳು ದೊರೆತಿವೆ ಹೊರತು ಸಾಂವಿಧಾನಿಕ ಹುದ್ದೆ ಸರಿಯಾಗಿ ದೊರಕಿಲ್ಲ. ಸಾಂವಿಧಾನಿಕ ಹುದ್ದೆಗಳ ವಿಚಾರದಲ್ಲಿ ಸಮುದಾಯಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವಾತಂತ್ರ ಸಿಕ್ಕು 75 ವರ್ಷ ಕಳೆದರೂ ಛಲವಾದಿ ಬಲಗೈ ಸಮುದಾಯದ ಒಬ್ಬ ನಾಯಕರಿಗೂ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ ಛಲವಾದಿ ಬಲಗೈ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಕೇವಲ ಮತ ಬ್ಯಾಂಕ್ ಅಗಿ ನೋಡುತ್ತಿದೆ ಎಂದು ಕಳಂಕವಿದೆ ಮುಖ್ಯಮಂತ್ರಿ ಮಾಡಿ ಈ ಕಳಂಕದಿಂದ ಮುಕ್ತರಾಗಲು ಇದು ಸೂಕ್ತವಾಗಿದ್ದರಿಂದ ಈಗ ಎರಡುವರೆ ವರ್ಷದಲ್ಲಿ ಆದರೂ ಅವಕಾಶವನ್ನು ಮಾಡಿಕೊಟ್ಟು ಛಲವಾದಿ ಬಲಗೈ ಋಣ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಬಾರಿ ಕಾಂಗ್ರೆಸ್ ಪಕ್ಷ ಛಲವಾದಿ ಸಮುದಾಯಕ್ಕೆ ಸಿಎಂ ಸ್ಥಾನ ನೀಡದೇ ಹೋದರೆ ಸಮುದಾಯದ ಪ್ರತಿ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪಕ್ಷ ನಮಗೆ ವಂಚನೆ ಮಾಡಿದೆ ಪಕ್ಷವನ್ನು ಇನ್ನು ಮುಂದೆ ಬೆಂಬಲಿಸಬೇಡಿ ಎಂದು ಜಾಗೃತಿ ಮೂಡಿ ಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಛಲವಾದಿ ಸಮಾಜದ ಮುಖಂಡರಾದ ಶಂಕರ್ ನಂದಿಹಾಳ, ಸಿ ಹನುಮೇಶ್ ಕಟ್ಟಿಮನಿ, ಮಾನಯ್ಯ ಬಿ ಗೋನಾಳ್, ಛಲವಾದಿ ಲೋಕೇಶ್ ಕಪಗಲ್, ಶೇಖರಪ್ಪ, ಡಿ ವೆಂಕಟೇಶ್, ಟಿ ಶೇಷಪ್ಪ, ಮಲ್ಲಿಕಾರ್ಜುನ ಬಿ ಗೋನಾಳ, ಮಧುರಾಜ್ ಬಿ ಗೋನಾಳ ಉಪಸ್ಥಿತರಿದ್ದರು.
