ವಿಠ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು ‘ಜಾನಪದ ಚಿತ್ತ ಕಾಲೇಜಿನತ್ತ’ ಸಂಭ್ರಮ!

ಸಂಡೂರು, ಆ.14: ತಾಲೂಕಿನ  ವಿಠ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ‘ಜಾನಪದ ಚಿತ್ತ ಕಾಲೇಜಿನತ್ತ ‘ ಕಾರ್ಯಕ್ರಮ ಆಯೋಜಿಸಲಾಗಿದೆ.

ಗ್ರಾಮದ ಹಂಪಿ ವಿರುಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ಆಯೋಜಿಸಿರುವ  ಕಾರ್ಯಕ್ರಮವನ್ನು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರು  ಬೆ.11-15 ಗಂಟೆಗೆ ಉದ್ಘಾಟಿಸುವರು.

ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಡಿ. ಎರಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಜಿಲ್ಲಾ  ಸಹಾಯಕ ನಿರ್ದೇಶಕ ಬಿ. ನಾಗರಾಜ್, ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್,  ಹವ್ಯಾಸಿ ಕಲಾವಿದ ಹಾಗೂ ನಿರೂಪಕ ಮಹಾಜನದಹಳ್ಳಿ ಕೊಟ್ರೇಶ್ ಅವರು ಉಪಸ್ಥಿತರಿರುವರು.

ಉಪನ್ಯಾಸ: ಜನ ಜೀವನದಲ್ಲಿ ಜಾನಪದ ಪಾತ್ರ ಹಾಗೂ ಶಿಕ್ಷಣದಲ್ಲಿ ಇದರ ಸಮಗ್ರ ಪರಿಚಯ ಕುರಿತು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಘಟಕ, ಬಳ್ಳಾರಿ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ‌. ಮಂಜುನಾಥ ಮತ್ತು ಗ್ರಾಮೀಣ ಜಾನಪದ ಹಾಗೂ ಜಾನಪದದಲ್ಲಿ ಸ್ತ್ರೀಯರ ಸ್ಥಾನ ಮಾನ ಕುರಿತು ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ, ಗೋಟಗೋಡಿಯ ಸಿಂಡಿಕೇಟ್ ಸದಸ್ಯರಾದ  ಡಾ॥ ಸಹನ ಪಿಂಜಾರ್ ಅವರು ವಿಶೇಷ ಉಪನ್ಯಾಸ ನೀಡುವರು.

ಕಂಪ್ಲಿಯ ಸಿ. ವಸೂರಪ್ಪ ಮುದ್ದಟನೂರು ಮತ್ತು ಡಿ. ವೆಂಕಟೇಶ್,  ಹಿರಿಯ ರಂಗಭೂಮಿ ಕಲಾವಿದರ ಕಲಾ ತಂಡದ ವತಿಯಿಂದ ಬಯಲಾಟದ ತತ್ವ ಪದಗಳ ಗಾಯನವಿದೆ. ಕಾಲೇಜು ವಿದ್ಯಾರ್ಥಿಗಳಿಂದ ಸಂಗೀತ, ಸಾಂಸ್ಕೃತಿಕ ಜಾನಪದ ನೃತ್ಯ ಗಾಯನ ವಿಶೇಷ ಆಕರ್ಷಣೆಯಾಗಿರುತ್ತದೆ.

ವಿಶೇಷ ಆಹ್ವಾನಿತರಾಗಿ  ರಂಗಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿಠಲಾಪುರ,  ಖುದಾರತ್ ಅಲಿ, ಪ್ರಾಂಶುಪಾಲರು, ಐಟಿಐ. ಕಾಲೇಜು, ವಿಠಲಾಪುರ,  ಹೆಚ್.ಎಂ. ಗುರುಬಸವರಾಜ್, ಮುಖ್ಯ ಗುರುಗಳು, ಡಾ| ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ, ವಿಶಲಾಪುರ, ಸ್ವಾಮಿ, ಮುಖ್ಯ ಗುರುಗಳು, ಸ.ಹಿ.ಪ್ರಾ ಶಾಲೆ, ವಿಠಲಾಪುರ, ಬಿ.ನಾಗರಾಜ್, ಕೆ.ಇ.ಬಿ. ಇಲಾಖೆ, ವಿಶಾಲಾಪುರ,  ಎಂ. ರಮೇಶ್, ಗ್ರಾಮ ಲೆಕ್ಕಾಧಿಕಾರಿಗಳು, ವಿಠಲಾಪುರ, ಶ್ರೀಮತಿ ಸಾವಿತ್ರಿ, ಅಂಗನವಾಡಿ ಶಿಕ್ಷಕಿ, ವಿಠಲಾಪುರ,  ಸಚಿನ್, ಅಂಚೆ ಇಲಾಖೆ, ವಿಠಲಾಪುರ,  ಜಿ. ತಿಮ್ಮಾರೆಡ್ಡಿ, ಗ್ರಂಥಾಲಯ ಮೇಲ್ವಿಚಾರಕರು, ವಿಠಲಾಪುರ ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದು ಟ್ರಸ್ಟ್‌ ಅದ್ಯಕ್ಷ ಜಿ.ಕೆ. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.

——

Leave a Reply

Your email address will not be published. Required fields are marked *