ಬಳ್ಳಾರಿ ಚಲೋ ಪಾದಯಾತ್ರೆ: ಬಿ.ವೈ. ವಿಜಯೇಂದ್ರ ಮತ್ತಿತರ ಗಣ್ಯರಿಂದ ನಗರದೇವತೆ ಶ್ರೀ ದುರ್ಗಮ್ಮ ದೇವಿ ದರ್ಶನ :

ಬಳ್ಳಾರಿ,  ಸೆ.10: ಬಳ್ಳಾರಿ ಚಲೋ ಪಾದಯಾತ್ರೆಯ 10 ನೇ ದಿನದ ಅಂಗವಾಗಿ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.  ವಿಜಯೇಂದ್ರ ಯಡಿಯೂರಪ್ಪ ಅವರು ನಗರ ದೇವತೆ ಶ್ರೀ ಕನಕದುರ್ಗ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಬಳಿಕ ಮೋತಿ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರ ಅವರ ಪುತ್ಥಳಿಗೆ ಮಾಲಾರ್ಪಣೆ, ರಂಗಮಂದಿರದ ಎದುರುಗಡೆ ಇರುವ ಡಾ. ಬಾಬು ಜಗಜೀವನ್‌ರಾಮ್‌ ಅವರ ಪುತ್ಥಳಿಗೆ ಮಾಲಾರ್ಪಣೆ, ಅಂಬೇಡ್ಕರ್‌ ಭವನದಲ್ಲಿ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ, ಕುಮಾರಸ್ವಾಮಿ ಗುಡಿ ಹತ್ತಿರವಿರುವ ಶ್ರೀ ಭಕ್ತ ಕನಕದಾಸ ಅವರ ಪುತ್ಥಳಿಗೆ ಮಾಲಾರ್ಪಣೆ, ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕರಾದ  ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ  ಬಿ. ಶ್ರೀರಾಮುಲು,  ಜನಾರ್ದನ್‌ ರೆಡ್ಡಿ, ಶ್ರೀ ಎಂ. ಪಿ. ರೇಣುಕಾಚಾರ್ಯ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ. ಶೈಲೇಂದ್ರ ಬೆಲ್ದಾಳೆ,  ದುರ್ಯೋಧನ ಐಹೊಳೆ,  ಬಿ. ಪಿ. ಹರೀಶ್‌, ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕರಾದ  ಎನ್.‌ ರವಿಕುಮಾರ್‌, ಮಾಜಿ ಶಾಸಕರಾದ  ಸೋಮಶೇಖರ್‌ ರೆಡ್ಡಿ, ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮೀ ಅಶ್ವಿನ್‌ ಗೌಡ, ಪ್ರಮುಖರಾದ ಶ್ರೀಮತಿ ಅರುಣಾ ಲಕ್ಷ್ಮಿ, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *