ಇಂದು ಕವಿ ಚಿದಂಬರ ನರೇಂದ್ರ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯ ಬಳಗದ ಹೆಮ್ಮೆಯ ಕವಿಗಳ ಕವಿತೆಯನ್ನು ಪ್ರಕಟಿಸುವುದರ ಮೂಲಕ karnatakakahale.com ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ.
*****

ಏನನ್ನಾದರೂ
ಕೊಡಬಲ್ಲೆ ನಾನೀಗ
ನಿನ್ನೊಂದಿಗಿನ ಆ ಒಂದು
ಸಾಮಾನ್ಯ ದಿನಕ್ಕಾಗಿ
ಯಾವ ಕೊನೆಯ ಮಾತಿನ,
ಯಾವ ಪರಿಪೂರ್ಣ ವಿದಾಯದ
ಮುಜುಗರ ಇಲ್ಲದೆ,
ಇನ್ನೊಂದು ಕೋಣೆಯಿಂದ ಕೇಳಿಸಿದ
ಕೇವಲ ಆ ನಿನ್ನ ಧ್ವನಿಗಾಗಿ
ಎಂದೂ ಏನೂ ಆಗೇ ಇಲ್ಲವೇನೋ
ಎನ್ನುವಂತೆ ನೀನು ಕೂಗಿ ಕರೆದ
ನನ್ನ ಹೆಸರಿನ ಸದ್ದಿಗಾಗಿ.

🌿 ಚಿದಂಬರ ನರೇಂದ್ರ, ಬೆಂಗಳೂರು
