ಕಿಷ್ಕಿಂದ ವಿವಿ 2ನೇ ಘಟಿಕೋತ್ಸವ: ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ನೈತಿಕವಾಗಿ ಬಳಕೆಯಾಗಬೇಕು -ಇಸ್ರೋ ವಿಜ್ಞಾನಿ ರೂಪ ಎಂ. ವಿ.

ಬಳ್ಳಾರಿ, ಅ.25: ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಂ ತಂತ್ರಜ್ಞಾನವನ್ನು  ನೈತಿಕವಾಗಿ ಬಳಸಬೇಕು ಎಂದು ಇಸ್ರೋ-ಇಸ್ಟ್ರಾಕ್‌ನ ನ್ಯಾವಿಗೇಷನ್ ಸಿಸ್ಟಮ್ಸ್ ವಿಭಾಗದ ಸಮೂಹ ನಿರ್ದೇಶಕಿ, ವಿಜ್ಞಾನಿ ರೂಪ ಎಂ.ವಿ. ಅವರು ಹೇಳಿದರು.
ಸಿರುಗುಪ್ಪ-ಬಳ್ಳಾರಿ ರಸ್ತೆಯಲ್ಲಿರವ  ಮೌಂಟ್
ವೀವ್ ಪ್ರದೇಶದಲ್ಲಿರುವ ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ ಶನಿವಾರ ಜರುಗಿದ ವಿವಿಯ ಎರಡನೇ  ಘಟಿಕೋತ್ಸವದಲ್ಲಿ  ಪಾಲ್ಗೊಂಡು ಅವರು ಘಟಿಕೋತ್ಸವ ಭಾಷಣ ಮಾಡಿದರು.
ಸೈಬರ್ ಭದ್ರತೆ ಮತ್ತು  ದತ್ತಾಂಶ ಗೌಪ್ಯತೆ ಕಾಪಾಡಬೇಕು ಎಂದು ತಿಳಿಸಿದರು.
ಪದವೀಧರರು ತಮ್ಮ  ಜ್ಞಾನವನ್ನು ಜನಹಿತಕ್ಕೆ ಬಳಸಬೇಕು. ಕಠಿಣ ಪರಿಶ್ರಮ, ಗುರು-ಹಿರಿಯರ ಆಶೀರ್ವಾದ ಮತ್ತು ಕುಟುಂಬದ ಬೆಂಬಲದೊಂದಿಗೆ ಯಶಸ್ಸು ಪಡೆಯಲು ಸಾಧ್ಯವೆಂದು ಹೇಳಿದರು.  ಓಷನ್‌ಸ್ಯಾಟ್ ಉಪಗ್ರಹ, ಮಂಗಳಯಾನ ಮತ್ತು
ಚಂದ್ರಯಾನ-೩ರ ಸಾಧನೆಗಳನ್ನು ಉಲ್ಲೇಖಿಸಿ,
ಸವಾಲುಗಳು ಎದುರಾದಾಗ ಯೋಜನೆಗಳನ್ನು ಕೈಬಿಡದೆ ಪರಿಹಾರ ಹುಡುಕುವುದೇ ಯಶಸ್ಸಿನ ಗುಟ್ಟು ಎಂದರು.
ತಂಡದ ಕೆಲಸ ಮತ್ತು ಸ್ವದೇಶಿ ನಾವೀನ್ಯ ಭಾರತದ ಬಾಹ್ಯಾಕಾಶ ಸಾಧನೆಗೆ ಬಲ ಎಂದು ರೂಪ ಅವರು ತಿಳಿಸಿದರು.
ಮೌಲ್ಯಮಾಪನ ವಿಭಾಗದ ಕುಲಸಚಿವರಾದ  ಡಾ. ರಾಜು ಜಾಡರ ಅವರ ನೇತೃತ್ವದಲ್ಲಿ, ಘಟಿಕೋತ್ಸವದ ಮೆರವಣಿಗೆ ವೇದಿಕೆಗೆ ಆಗಮಿಸಿತು.
ಕುಲಪತಿಗಳಾದ ಪ್ರೊ. ಟಿ. ಎನ್‌. ನಾಗಭೂಷಣ ತಮ್ಮ ಸ್ವಾಗತ ಭಾಷಣದಲ್ಲಿ ವಿಶ್ವವಿದ್ಯಾಲಯದ ಸಂಕ್ಷಿಪ್ತ ವರದಿಯನ್ನು ಮಂಡಿಸಿ  ಪ್ರಸಕ್ತಶಾಲಿನ ಸಾಧನೆಗಳನ್ನು ವಿವರಿಸಿದರು.


ಕುಲಾಧಿಪತಿಗಳು, ಕುಲಪತಿಗಳು, ಮತ್ತು ವೇದಿಕೆ ಮೇಲಿರುವ ಗಣ್ಯರೆಲ್ಲರು ಗಿರೀಶ್ ರಾಮಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಮಾಡಿದರು.
ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿಕಾಯದ  ಡೀನ್ ಡಾ. ವಿ. ಸಿ. ಪಾಟಿಲ್‌ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕುಲಸಚಿವರು ಮೌಲ್ಯಮಾಪನ ಡಾ. ರಾಜು ಜಾಡರ ಅವರು ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಿಸಿಎ ಪದವಿಯ ವಿಭಾಗದಲ್ಲಿ, ಕು. ಶೃತಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಸ್ವೀಕರಿಸಿದರು. ಕು. ಎಂ. ಲತಾ ದ್ವಿತೀಯ ರ‍್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಎಂಬಿಎ ವಿಭಾಗದಲ್ಲಿ, ಕು. ಶ್ವೇತಾ ಜಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಸ್ವೀಕರಿಸಿದರು, ಕು. ಮರಾಠಿ ಸಾಹಿತ್ಯ ದ್ವಿತೀಯ ರ‍್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಎಂಸಿಎ ವಿಭಾಗದಲ್ಲಿ, ಕು. ಆರ್.ಎಂ. ಸುಹಾನಾ ಸಹ್ರೀನ್ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಸ್ವೀಕರಿಸಿದರು, ಕು. ಪೆದ್ದದೇವರ ನಜ್ನೀನ್ ದ್ವಿತೀಯ ರ‍್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಎಂಟೆಕ್ ವಿಭಾಗದಲ್ಲಿ, ಕು. ಪಿ. ಸಹನಾ ಪ್ರಸಾದ್ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಸ್ವೀಕರಿಸಿದರು. ಎಂ. ರಾಘವೇಂದ್ರ ದ್ವಿತೀಯ ರ‍್ಯಾಂಕ್ ಪಡೆದು ಬೆಳ್ಳಿಯ ಪದಕ ಸ್ವೀಕರಿಸಿದರು. ಒಟ್ಟಾರೆಯಾಗಿ  ೧೫೫ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಿದರು.
ವಿವಿ ಕುಲಾಧಿಪತಿ ಡಾ. ಯಶವಂತ್‌ ಭೂಪಾಲ್, ಉನ್ನತ ಶಿಕ್ಷಣ ಸಚಿವ  ಬಸವರಾಜ ರಾಯರೆಡ್ಡಿ, ಮಾಜಿ ಸಚಿವರಾದ ಬಿ. ಆರ್.‌ ಯಾವಗಲ್‌, ವಿವಿ ಸಹ ಕುಲಾಧಿಪತಿ ವೈ. ಜೆ. ಪೃಥ್ವಿರಾಜ್‌,  ಕುಲಸಚಿವ ಪ್ರೊ. ಯು. ಈರಣ್ಣ,  ವಿತ್ತಾಧಿಕಾರಿಗಳಾದ ನಮ್ರತಾ ಬಿ. ಯಾವಗಲ್, ಟಿ. ಇ. ಹಚ್.‌ ಅರ್‌, ಡಿ. ಟ್ರಸ್ಟೀಗಳಾದ ಅಶೋಕ್‌ ಭೂಪಾಲ್‌, ಅಮರ್ ಜ್‌ ಭೂಪಾಲ್‌,  ಪ್ರೊ. ಮಂಜುನಾಥ್ ಎಸ್. ಸೇರಿದಂತೆ ವಿವಿಧ ನಿಕಾಯಗಳ ಡೀನ್ ಗಳು, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶೈಕ್ಷಣಿಕ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.
—–

Leave a Reply

Your email address will not be published. Required fields are marked *