ಕಿಷ್ಕಿಂದ ವಿವಿ ಭವಿಷ್ಯದಲ್ಲಿ  ಕಲ್ಯಾಣ ಕರ್ನಾಟಕದ ಗ್ಲೋಬಲ್ ವಿವಿಯಾಗಲಿದೆ  : ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ

ಬಸವರಾಜ ರಾಯರೆಡ್ಡಿ

ಬಳ್ಳಾರಿ, ( ಕಿಷ್ಕಿಂದ ವಿ. ವಿ), ಅ.24: ಜಿಲ್ಲೆಯ ಕಿಷ್ಕಿಂದ  ವಿಶ್ವವಿದ್ಯಾಲಯವು ಭವಿಷ್ಯದಲ್ಲಿ
ಕಲ್ಯಾಣ ಕರ್ನಾಟಕದ ಗ್ಲೋಬಲ್ ವಿಶ್ವವಿದ್ಯಾಲಯ
ವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಅವರು ಸಿರುಗುಪ್ಪ-ಬಳ್ಳಾರಿ ರಸ್ತೆಯಲ್ಲಿರುವ  ಮೌಂಟ್
ವೀವ್ ಪ್ರದೇಶದಲ್ಲಿರುವ ಕಿಷ್ಕಿಂದ  ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿ ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿದ ಶಿಕ್ಷಣ  ಮತ್ತು ಸೌಲಭ್ಯಗಳನ್ನು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಶಿಕ್ಷಣ ಎಂಬುದು ನಿಂತ ನೀರಾಗಬಾರದು ಮತ್ತು  ಕೇವಲ ಸರ್ಕಾರಿ ಹುದ್ದೆಗೆ ಮಾತ್ರ ಸೀಮಿತವಾಗಬಾರದು.
ಶಿಕ್ಷಣ ಪ್ರತಿಯೊಬ್ಬರಿಗೂ ಉನ್ನತವಾದ ಹೊಸ ಅವಕಾಶಗಳನ್ನು ಸೃಷ್ಟಿಸುವ ವ್ಯವಸ್ಥೆಯಾಗಬೇಕು ಎಂದು ಅಭಿಪ್ರಾಯಪಟ್ಟರು.                        ಶಿಕ್ಷಣದಲ್ಲಿ ಭಾಷೆಯ ತೊಡಕಾಗಬಾರದು ಕೇವಲ ಇಂಗ್ಲೀಷಿನಿಂದ ಮಾತ್ರ ಉನ್ನತವಾದ ಹುದ್ದೆ ಸಾಧ್ಯ ಎನ್ನುವುದು ಭ್ರಮೆಯಾಗಿದೆ ಆದರೆ ಚೀನಾ, ಜಪಾನ್, ಉತ್ತರ ಕೋರಿಯಾ ಸೇರಿ ಹಲವು ಅಭಿವೃದ್ಧಿ ಶೀಲ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ತಮ್ಮದೇ ಭಾಷೆಯಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿವೆ ಎಂದು ತಿಳಿಸಿದರು.
ದೇಶದಲ್ಲಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಶೇ.  40% ರಷ್ಟು ಬೆಂಗಳೂರಿನಲ್ಲಿ ತಮ್ಮ ಶಿಕ್ಷಣವನ್ನು
ಪಡೆಯುತ್ತಿದ್ದಾರೆ ಎಂದರು.


ಬೆಂಗಳೂರು ದೇಶದ ಅತಿ ದೊಡ್ಡ ಶಿಕ್ಷಣದ ಹಬ್  ಎಂದರೂ ತಪ್ಪಾಗಲಿಕ್ಕಿಲ್ಲ, ದೇಶಕ್ಕೆ ಸ್ವತಂತ್ರ ಬಂದಾಗ ಶೇಕಡಾ 18ರಷ್ಟಿದ್ದ ಶೈಕ್ಷಣಿಕ ಪ್ರಗತಿ ಇಂದು ಶೇಕಡಾ 80ಕ್ಕೆ ಏರಿದೆ ಎಂದು ಹರ್ಷ ವ್ಯಕ್ತಪಡಿಸಿದ ಸಚಿವರು,  ಇದಕ್ಕೆ ಮುಖ್ಯ ಕಾರಣ ದೇಶದ ಮೊದಲ ಪ್ರಧಾನಿ ಪಂಡಿತ್  ನೆಹರು, ಪ್ರದಾನಿಗಳಾಗಿದ್ದ ಇಂದಿರಾಗಾಂಧಿ, ಡಾ.ಮನಮೋಹನ್ ಸಿಂಗ್ ಅವರ ದೂರಗಾಮಿ ಯೋಜನೆಗಳಾಗಿವೆ.  ಅದೇ ರೀತಿಯಲ್ಲಿ ರಾಜ್ಯದಲ್ಲಿ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದರು.  ಈಗ ಸಿಎಂ  ಡಿಕೆ ಶಿವಕುಮಾರ್ ಸಹ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಯಾವುದೇ ವಿಶ್ವವಿದ್ಯಾಲಯದಲ್ಲಿ ಅನುದಾನದ
ಕೊರತೆ ಇಲ್ಲ ಮುಂದಿನ ದಿನಗಳಲ್ಲಿ  ವಿಶ್ವವಿದ್ಯಾಲಯ ಮತ್ತು ಪ್ರಥಮದರ್ಜೆ ಕಾಲೇಜುಗಳಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ತುಂಬಲಾಗುವುದು. ರಾಜ್ಯದ
ವಿಶ್ವವಿದ್ಯಾಲಯಗಳಿಗೆ ವಿಸಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು .
ಇಂದಿನ ಸರ್ಕಾರದಲ್ಲಿ ನನ್ನ ಆಯ್ಕೆ ಹಣಕಾಸು ಇಲಾಖೆ ಆಗಿತ್ತು ಆದರೆ ಸಿಎಂ ಡಿ ಕೆ ಶಿವಕುಮಾರ್ ಅವರು ಶೈಕ್ಷಣಿಕ ಪ್ರಗತಿಯ ಉದ್ದೇಶದಿಂದ ನನ್ನನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ ನಮ್ಮ ಸರ್ಕಾರಕ್ಕೆ ಸಮಯದ ಅಭಾವವಿದೆ. ಅಷ್ಟರಲ್ಲಿ ಈ ಹುದ್ದೆಗೆ ನಾನು
ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡುತ್ತೇನೆ ಎಂದ ರಾಯರೆಡ್ಡಿ ಅವರು, ಪ್ರಸ್ತುತ ಶೈಕ್ಷಣಿಕ ಪ್ರಗತಿಯ ಕಾಳಜಿ ಉಳ್ಳ
ನಾಯಕರಿಂದಾಗಿ 1950ರಲ್ಲಿ ಕೇವಲ 20-25 ಇದ್ದ  ವಿಶ್ವವಿದ್ಯಾಲಯಗಳು ಇಂದು ದೇಶದಲ್ಲಿ 600ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ ಜೊತೆಗೆ ಖಾಸಗಿ   ವಿಶ್ವವಿದ್ಯಾಲಯಗಳು ಸಹ ಕಾರ್ಯನಿರ್ವಹಿಸುತ್ತಿವೆ  ಇದರಿಂದಾಗಿ ದೇಶ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ, ಜೊತೆಗೆ ರಾಜ್ಯದಲ್ಲಿರುವ ಮಠಮಾನ್ಯಗಳು ಸಹ ಶಿಕ್ಷಣಕ್ಕೆ ಅತಿ ಹೆಚ್ಚಿನ ಒತ್ತುಕೊಟ್ಟು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಜಹಗೀರದಾರ್ ಅವರ ಕುಟುಂಬ ಅತಿ ಹೆಚ್ಚು ಪ್ರಾಶಸ್ತ್ರವನ್ನು ನೀಡುತ್ತಿದೆ.  ವಿದ್ಯಾರ್ಥಿಗಳು ಇಲ್ಲಿನ ಅನುಕೂಲಗಳನ್ನು ಪಡೆದುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆಯನ್ನು
ಒಡ್ಡುವಂತೆ ಆಗಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಗಿರೀಶ್ ರಾಮಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ ಎಂದು ಪ್ರಧಾನ ಮಾಡಲಾಯಿತು ಮತ್ತು  ಕಿಷ್ಕಿಂದ ವಿಶ್ವವಿದ್ಯಾಲಯದ  155
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು
ಮತ್ತು  ಬಿಸಿಎ, ಎಂಬಿಎ, ಎಂಸಿಎ ಮತ್ತು ಎಂಟೆಕ್ ವಿಭಾಗಗಳಲ್ಲಿ ಎಂಟು ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ ಪದಕಗಳನ್ನು ನೀಡಿ  ಗೌರವಿಸಲಾಯಿತು.


ಇಸ್ರೋ ವಿಜ್ಞಾನಿ ರೂಪಾ ಎಂ. ವಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ಮಾಜಿ ಸಚಿವ   ಬಿ ಆರ್ ಯಾವಗಲ್  ಅವರು ಮಾತನಾಡಿದರು.
ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಯಶವಂತ್‌ ಭೂಪಾಲ ಅವರು ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಸಚಿವರಾದ ಬಿ. ಆರ್.‌ ಯಾವಗಲ್‌ ಹಾಗೂ
ವಿಜ್ಞಾನಿ ರೂಪಾ ಎಂ. ವಿ. ಇವರನ್ನು ಗೌರವಿಸಿದರು.
ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ಡಾ. ಯಶವಂತ್‌ ಭೂಪಾಲ್,  ಸಹ ಕುಲಾಧಿಪತಿ ವೈ. ಜೆ. ಪೃಥ್ವಿ ರಾಜ್‌, ಕುಲಪತಿ  ಪ್ರೊ. ಟಿ. ಎನ್‌. ನಾಗಭೂಷಣ, ಕುಲಸಚಿವ ಪ್ರೊ. ಯು. ಈರಣ್ಣ, ವಿತ್ತಾಧಿಕಾರಿ ನಮ್ರತಾ ಬಿ. ಯಾವಗಲ್, ಟಿ. ಇ. ಹಚ್.‌ ಅರ್‌, ಡಿ. ಟ್ರಸ್ಟೀಗಳಾದ ಅಶೋಕ್‌ ಭೂಪಾಲ್‌, ಅಮರ್ ರಾಜ್‌ ಭೂಪಾಲ್‌, ವಿವಿಧ ನಿಕಾಯಗಳ ಡೀನ್ ಗಳು ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶೈಕ್ಷಣಿಕ ಮಂಡಳಿಯ ಸದಸ್ಯರು,  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. ಪ್ರೊ. ಮಂಜುನಾಥ ಎಸ್.‌ ಕಾರ್ಯಕ್ರಮ ನಿರೂಪಿಸಿದರು.      *****

Leave a Reply

Your email address will not be published. Required fields are marked *