ಬೆಂಗಳೂರು, ನ.1: ಪತ್ರಕರ್ತ ರಘುರಾಮ್ ಅವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಚಂದಾಪುರದ ಸೂರ್ಯ ಎಲೆಗನ್ಸ್‌ನ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಶ್ರೀ ಭುವನೇಶ್ವರಿ ದೇವಿಯ ಪೂಜೆ, ಧ್ವಜಾರೋಹಣ, ನಾಡಗೀತೆ ಹಾಗೂ ರಾಷ್ಟ್ರಗೀತೆಯೊಂದಿಗೆ ಆರಂಭವಾಯಿತು.
ಬಳಿಕ ಸಂಘದ ಉಪಾಧ್ಯಕ್ಷ ಸರ್ಪಭೂಷಣ ಸ್ವಾಗತ ಭಾಷಣ ಮಾಡಿದರು. ಶ ಬಿ.ಎಂ. ರವಿ, ರಾಜಮ್ಮ ಹಾಗೂ ತಂಡದವರು ನಾಡಗೀತೆ ಮತ್ತು ರೈತಗೀತೆಯನ್ನು ಪ್ರಸ್ತುತಪಡಿಸಿದರು. ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ವಿಶೇಷ ಭಾಷಣ ಮಾಡಿ ಕನ್ನಡ ನಾಡು, ನುಡಿ, ಭಾಷೆ, ನೆಲ ಮತ್ತು ಜಲದ ಮಹತ್ವವನ್ನು ವಿವರಿಸಿದರು.
ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು. ಈ ಸಂದರ್ಭದಲ್ಲಿ ಐಡಿ ಸಂಸ್ಥೆಯ ವಿವೇಕ್ ಸೌಂದರರಾಜ್ ಅವರು ಉಡುಗೊರೆ ಹ್ಯಾಂಪರ್‌ಗಳನ್ನು ವಿತರಿಸಿದರು. ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿರುವ 85 ವರ್ಷದ ಕನ್ನಡ ಪ್ರೇಮಿ ಅಬ್ದುಲ್ ರಹೀಮ್ ಹಾಗೂ ಉದ್ಯಮಿ ವೆಂಕಟೇಶ್ ಗಾದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ (ಪಿಆರ್‌ಒ), ಬಾಬುರಾವ್, ಉಪಾಧ್ಯಕ್ಷರಾದ ರವಿ, ದೀಪಾ, ಖಜಾಂಚಿ ನಿಂಬಾಳ್, ವೆಂಕಟೇಶ್ ಗಾದ, ನಾಗಭೂಷಣ್, ಶಂಕ್ರಪ್ಪ, ಪ್ರಸಾದ್, ನಾಗೇಂದ್ರ, ಗಿರೀಶ್, ಮಂಜುನಾಥ್, ಅಸೋಸಿಯೇಷನ್ ಅಧ್ಯಕ್ಷ ಓಬಳ ರೆಡ್ಡಿ, ಉಪಾಧ್ಯಕ್ಷ ಸರ್ಪಭೂಷಣ್, ದಿಲ್ಶಾದ್ ಬೇಗಂ, ಸಮೀರ್ ಕುಲಕರ್ಣಿ, ಮಂಜು ಪಾಟೀಲ್, ಶ್ರೀನಿವಾಸ್ ವಿ., ಸೂರಜ್ ಗೌಡ ಸೇರಿದಂತೆ ಹಲವು ಗಣ್ಯರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.
ಕೊನೆಯಲ್ಲಿ ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು. ಕನ್ನಡ ಭಾಷೆ, ನಾಡು, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
