ನಮ್ಮ ಹೆಮ್ಮೆಯ ಕರುನಾಡು
ಕಪ್ಪು ಮಣ್ಣಿನ ನಾಡಿದು
ಗಂಧ ಚಂದನದ ಬೀಡಿದು
ಇಳೆಯಲಿ ನಾಕದ ಗೂಡಿದು
ನಮ್ಮ ಐಸಿರಿ ಕರುನಾಡಿದು ||ಪಲ್ಲವಿ||
ಸಂಸ್ಕ್ರತಿ ಮಿಲನದ ತೊಟ್ಟಿಲಿದು
ಜಾತಿಧರ್ಮದ ಹೂ ದೋಟವಿದು
ಶಾಂತಿ ಸಹಬಾಳ್ವೆಯ ತಿರುಳಿದು
ಸ್ನೇಹ ಸಂಬಂಧದ ಕರುಳಿದು
ನಮ್ಮ ಭವ್ಯ ಕನ್ನಡನಾಡಿದು ||೧||
ಶಿಲ್ಪ ಕಲೆಯ ತವರೂರಿದು
ವಿಶ್ವ ಪರಂಪರೆಯ ಕೂಟವಿದು
ರಮ್ಯತಾಣ ಪುಣ್ಯಕ್ಷೇತ್ರಗಳ ಸಗ್ಗವಿದು
ಕವಿಸಂತರ ಕರ್ಮ ಭೂಮಿಯಿದು
ಕೆಚ್ಚೆದೆ ಶೂರರ ಕನ್ನಡನಾಡಿದು ||೨||
ಸುಲಲಿತ ಕನ್ನಡ ನುಡಿಯಿದು
ಬಹು ಪ್ರಾಚೀನ ಭಾಷೆಯಿದು
ಬಲಂದ ಚೆಂದದ ಲಿಪಿಯಿದು
ಅಷ್ಟ ಜ್ಞಾನಪೀಠ ವಾಣಿಯಿದು
ನಮ್ಮ ಸಿರಿಗನ್ನಡ ನುಡಿಯಿದು ||೩||
ಕುಕಿಲಿಂಪು ಕಸ್ತೂರಿ ಕಂಪಿದು
ಭೃಂಗಗಳ ಝೇಂಕಾರವಿದು
ಖಗಗಳ ಚಿಲಿಪಿಲಿ ಉಲಿಯಿದು
ಸವಿ ಹಾಲ್ಜೇನ ಸುಮಧುರವಿದು
ನಮ್ಮ ಹೊನ್ನನುಡಿ ಕನ್ನಡವಿದು ||೪||

-ಗೋಸಿಂಹಾ, ಹೊಸಪೇಟೆ
