ಮೈಸೂರು, ನ.13: ಡಾ. ಸಿ.ಎನ್. ಮೃತ್ಯುಂಜಯಪ್ಪ ಸಹೃದಯ ಬಳಗ ನೀಡುವ “ಡಾ. ಸಿ.ಎನ್. ಮೃತ್ಯುಂಜಯಪ್ಪ ದತ್ತಿ ಪ್ರಶಸ್ತಿ’ಗೆ ಸಾಹಿತಿ ಮತ್ತು ಅಂಕಣಕಾರ ಡಾ. ಅಮ್ಮಸಂದ್ರ ಸುರೇಶ್ ಅವರು ಆಯ್ಕೆಯಾಗಿದ್ದಾರೆ. ಸಾಹಿತ್ಯ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಡಾ. ಸುರೇಶ್ ಅವರು ಸಲ್ಲಿಸಿರುವ ಅನುಪಮ ಸೇವೆಯನ್ನು ಗಮನಿಸಿ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಳಗದ ಪ್ರಕಟಣೆ ತಿಳಿಸಿದೆ.
ಅಭಿನಂದನೆ: ಡಾ. ಸಿ.ಎನ್. ಮೃತ್ಯುಂಜಯಪ್ಪ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಸಾಹಿತಿ ಮತ್ತು ಅಂಕಣಕಾರ ಡಾ. ಅಮ್ಮಸಂದ್ರ ಸುರೇಶ್ ಅವರನ್ನು ತುಮಕೂರು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಮುದ್ದೇಶ್ ಬಿ.ಟಿ, ಬಾಗಲಕೋಟೆಯ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ. ಆರ್. ನಾಗರಾಜು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಳ್ಳಾರಿಯ ಸಿ.ಮಂಜುನಾಥ ಅವರು ಅಭಿನಂದಿಸಿದ್ದಾರೆ.
