ನ. 29 ರಂದು ಪತ್ರಕರ್ತ ಕೆ.ಎಂ. ಮಂಜುನಾಥ ಡಿ.ಕಗ್ಗಲ್ಲು ಅವರ ‘ಶಿವಾಂಶ ಸಂಭೂತ ಶ್ರೀ ಎರಿತಾತ’ ಕೃತಿ ಲೋಕರ್ಪಾಣೆ 

ಬಳ್ಳಾರಿ, ನ. 27: ಸ್ಥಳೀಯ ಸಾವಿತ್ರಮ್ಮ ಪ್ರಕಾಶನ ಪ್ರಕಟಿಸಿರುವ ಪತ್ರಕರ್ತ ಕೆ.ಎಂ. ಮಂಜುನಾಥ ಡಿ.ಕಗ್ಗಲ್ಲು ಅವರ ‘ಶಿವಾಂಶ ಸಂಭೂತ ಶ್ರೀ ಎರಿತಾತ’ ರವರ ಭಕ್ತಿಗೀತೆಗಳ ಕೃತಿ ಲೋಕರ್ಪಾಣೆ  ಕಾರ್ಯಕ್ರಮ ನ. 29 ರಂದು ಭಾನುವಾರ ನಗರದ ಡಾ. ರಾಜಕುಮಾರ ರಸ್ತೆಯಲ್ಲಿರುವ ಶ್ರೀಮತಿ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕ, ಗಾಯಕ ಯಲ್ಲನಗೌಡ ಶಂಕರಬಂಡೆ ಅವರು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಜರುಗಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಚೇಳ್ಳಗುರ್ಕಿಯ ಸಿ. ಜಿ. ಹಂಪಣ್ಣ ಅವರು ವಹಿಸುವರು.                                ದಿವ್ಯ ಸಾನ್ನಿಧ್ಯವನ್ನು ಸೊಂಡೂರಿನ  ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ  ಶ್ರೀ ಪ್ರಭುಸ್ವಾಮಿಗಳು ವಹಿಸುವರು.

ಆಧ್ಯಾತ್ಮಿಕ ಚಿಂತಕರಾದ ಚಂದ್ರಶೇಖರಗೌಡ ಮಸೀದಿಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸವರು.

ಮುಖ್ಯ ಅತಿಥಿಗಳಾಗಿ ಚೇಳ್ಳಗುರ್ಕಿಯ ಶ್ರೀ ಎರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ನ ಎಚ್. ಬಾಳನಗೌಡ, ಶ್ರೀ ಎರಿಸ್ವಾಮಿ ದಾಸೋಹ ಸೇವಾ ಸಂಘದ ಜೆ. ದೊಡ್ಡಬಸವನಗೌಡ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಶಿವಲಿಂಗಪ್ಪ ಹಂದಿಹಾಳು,  ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ. ಎಸ್. ಜೆ. ವಿ. ಮಹಿಪಾಲ್, ನಿವೃತ್ತ ಶಿಕ್ಷಕ ಕೆ. ಎಂ. ಸಿದ್ಧಲಿಂಗಯ್ಯ, ಹಿರಿಯ ಪತ್ರ  ಶಶಿಧರ ಮೇಟಿ ಅವರು ಭಾಗವಹಿಸುವರು.

ಕೆ.ಎಂ. ಮಂಜುನಾಥ ಡಿ.ಕಗ್ಗಲ್ಲು

ಕೃತಿಕಾರ ಕನ್ನಡಪ್ರಭದ ವಿಶೇಷ ವರದಿಗಾರ  ಕೆ. ಎಂ. ಮಂಜುನಾಥ ಡಿ.ಕಗ್ಗಲ್ಲು  ಅವರು ಉಪಸ್ಥಿತರಿರುವರು.

ಮಧುರ ಭಕ್ತಿ ಸಂಗೀತ: ಶಿವಾಂಶ ಸಂಭೂತ ಶ್ರೀ ಎರಿತಾತನವರ ಭಕ್ತಿಗೀತೆಗಳ ಗಾಯನವನ್ನು ಗಾಯಕ ದೊಡ್ಡಬಸವ ಗವಾಯಿ ಡಿ.ಕಗ್ಗಲ್ಲು,  ಗಾಯಕ ದಂಪತಿಗಳಾದ ಬೆಳಗಲ್ಲು ಹನುಮಂತ ಮತ್ತು  ಶ್ರೀಮತಿ ಬೆಳಗಲ್ಲು ರೇಖಾ ಅವರು ಪ್ರಸ್ತುತ ಪಡಿಸುವರು.

*****

Leave a Reply

Your email address will not be published. Required fields are marked *