ಸಿಟಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ:ಎಲ್ಲರೂ ಸಮಾನ ಅವಕಾಶ ಪಡೆಯಲು ಡಾ. ಅಂಬೇಡ್ಕರ್ ರಚನೆಯ ಸಂವಿಧಾನವೇ ಕಾರಣವಾಗಿದೆ -ಪ್ರೊ. ವೀರಭದ್ರಪ್ಪ ತಂಬ್ರಹಳ್ಳಿ

ಬಳ್ಳಾರಿ. ನ . 26 : ಸಂವಿಧಾನದಿಂದಾಗಿ ಸಮಾಜದಲ್ಲಿ ಎಲ್ಲರೂ ಸಮಾನವಾದ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದೆ ಅದಕ್ಕೆ ಮುಖ್ಯ ಕಾರಣವೆಂದರೆ ಡಾ. ಬಿ ಆರ್ ಅಂಬೇಡ್ಕರ್ ರಚಿಸಿರುವ ಭಾರತ ಸಂವಿಧಾನವೇ ಕಾರಣವಾಗಿದೆ ಇಂದು ಶ್ರೀಮತಿ ಗಾಲಿ ರುಕ್ಮಿಣಿಮ್ಮ ಚೆಂಗಾರೆಡ್ಡಿ ಮ್ಯಾನೇಜ್ಮೆಂಟ್(ಸಿಟಿ) ಕಾಲೇಜಿನ ಪ್ರಾಂಶುಪಾಲರಾದ ವೀರಭದ್ರಪ್ಪ ತಂಬ್ರಹಳ್ಳಿ ಅವರು ಹೇಳಿದರು.

ಅವರು ಗುರುವಾರ ಶ್ರೀಮತಿ ಗಾಲಿ ರುಕ್ಮಿಣಿಮ್ಮ ಚಂಗಾರೆಡ್ಡಿ ಸ್ಮಾರಕ ಮ್ಯಾನೇಜ್ಮೆಂಟ್ (ಸಿಟಿ)ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 78ನೇ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.        ಸಂವಿಧಾನವನ್ನು 1949 ನವಂಬರ್ 26ರಂದು ನಮ್ಮಷ್ಟಕ್ಕೆ ನಾವೇ ಅರ್ಪಿಸಿಕೊಂಡು 1950 ಜನವರಿ 26ರಂದು ಜಾರಿಗೆ ಮಾಡಿಕೊಳ್ಳಲಾಯಿತು 1949 ನವಂಬರ್ 26ರಂದು ಏಕೆ ನಾವು ಜಾರಿಗೆ ತರಲಿಲ್ಲ ಅನ್ನೋದು ಮುಖ್ಯ ಏಕೆಂದರೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಂತಹ ಸಂದರ್ಭದಲ್ಲಿ ಲಾಹೋರ್ ಅಧಿವೇಶನದಲ್ಲಿ 1930 ಜನವರಿ 26ರಂದು ಬ್ರಿಟಿಷರಿಂದ ನಮ್ಮ ಸ್ವಾತಂತ್ರವನ್ನು ಪಡೆಯಲೇಬೇಕೆನ್ನುವ ಒಂದು ಘೋಷಣೆಯನ್ನು ಮಾಡಲಾಗಿತ್ತು ಆ ದಿನದ ಸವಿನೆನಪಿಗಾಗಿ 1949 ನವೆಂಬರ್ 26 ರಿಂದ 1950 ಜನವರಿ 26ನೇ ದಿನಾಂಕದ ವರೆಗೆ ಮುಂದೂಡಿ 1950 ಜನವರಿ ನಮ್ಮ ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು ಎಂದು ತಿಳಿಸಿದರು.
ಸಂವಿಧಾನದ ಕರ್ತೃ ಪಿತಾಮಹ ಡಾ. ಬಿಆರ್ ಅಂಬೇಡ್ಕರ್ ಅವರು ಹಗಲಿರುಳು ಶ್ರಮವಹಿಸಿ ಸಂವಿಧಾನದ ರಚನಾ ಸಭೆಯಲ್ಲಿ ಪ್ರಮುಖವಾದಂತಹ ಪಾತ್ರವಹಿಸಿ ನಮ್ಮ ದೇಶಕ್ಕೆ ಅಗತ್ಯವಾದ ಎಲ್ಲಾ ಸರ್ಕಾರಗಳಿಗೂ ಸಂಬಂಧಿಸಿದ ಕಾನೂನುಗಳ ಗ್ರಂಥವನ್ನು ಮಹಾನ್ ಶಕ್ತಿ ಡಾ. ಬಿಆರ್ ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದರು.

ಡಾ. ಬಿ ಆರ್ ಅಂಬೇಡ್ಕರ್ ಅವರ ಶ್ರಮದಿಂದ ಸಂವಿಧಾನವನ್ನು ತಯಾರಿಸಲು 2 ವರ್ಷ 11 ತಿಂಗಳು 18 ದಿನಗಳ ಕಾಲ ಹಿಡಿಯಿತು ಭಾರತದಲ್ಲಿ ವಿವಿಧ ಸಂಪ್ರದಾಯ ಧರ್ಮ ಜಾತಿ ಬುಡಕಟ್ಟುಗಳು ಇರುವ ದೇಶ ಈ ಸಮುದಾಯಗಳಲ್ಲಿ ನಾವೆಲ್ಲರೂ ಒಂದೇ ಭಾರತೀಯರು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಕಂಡು ಇರುವಂತಹ ದೇಶ ಭಾರತ ಹಾಗಾಗಿ ನಮ್ಮ ದೇಶದ ಜನತೆಗಾಗಿ ಎಲ್ಲರೂ ಸಾಮಾಜಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ಸಮಾನರಾಗಿ ಹಾಗೂ ನ್ಯಾಯಯುತವಾಗಿ ಬದುಕುವ ಮೌಲ್ಯಗಳನ್ನು ಕಟ್ಟಿಕೊಟ್ಟಿರತಕ್ಕಂತ ಸಂವಿಧಾನ ಭಾರತ ಸಂವಿಧಾನವಾಗಿದೆ ಎಂದು ವಿವರಿಸಿದರು.

ಭಾರತ ಸಮಗ್ರತೆಯನ್ನು ಹೊಂದುವ ದೃಷ್ಟಿಯಿಂದ ವಿದ್ಯಾರ್ಥಿಗಳು ನಾವೆಲ್ಲ ಭಾರತೀಯರು ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮರ್ಪಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಭಾಗಿಯಾಗಿ ವಿಕಸಿತ ಭಾರತವನ್ನು ನಿರ್ಮಾಣ ಮಾಡಬೇಕು ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಜಗತ್ತಿನಲ್ಲಿಯೇ ಅದರ ಯಶಸ್ವಿಯ ಹಿಂದೆ ಆ ಕಾನೂನುಗಳ ಗ್ರಂಥ ಇರುವುದು ಮರೆಯುವಂತಿಲ್ಲ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರಗಳು ಸಂಬಂಧಿಸಿ ದಂತೆ ಕಾನೂನುಗಳನ್ನು ರೂಪಿಸುವಂತಹ ಗ್ರಂಥ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಪಠಿಸಲಾಯಿತು.                                               ಕಾರ್ಯಕ್ರಮದಲ್ಲಿ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರು ರಾಜಪ್ಪ ಅವರು, ಡಾ. ಶ್ರೀದೇವಿ ಹಿರಿಯ ಗ್ರಂಥ ಪಾಲಕರು, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವ್ ಕುಮಾರ್ ಹಾಗೂ ಅತಿಥಿ ಉಪನ್ಯಾಸಕರು ಶೈಕ್ಷಣಿಕ ಸಂಯೋಜಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗಾಯತ್ರಿ ಬಾವಿಕಟ್ಟಿ ನಿರೂಪಿಸಿದರು.   ಪ್ರೊ. ಹಾಲ್ಕರ್ ರಾಚಪ್ಪ ವಂದಿಸಿದರು.

Leave a Reply

Your email address will not be published. Required fields are marked *