
ಬಳ್ಳಾರಿ, ನ.26: ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾಗಿ ಗುರುವಾರ ವಿಶ್ವಜೀತ್ ಮೆಹತಾ ಅವರು ಅಧಿಕಾರ ವಹಿಸಿಕೊoಡಿದ್ದಾರೆ.
ಹೊಸಪೇಟೆಯ ವಿಜಯನಗರ ಅಭಿವೃದ್ದಿ ಪ್ರಾಧಿಕಾರ(ವಾಡಾ)ದ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಮೆಹತಾ ಅವರಿಗೆ ವಿವಿಯ ಕುಲಸಚಿವರಾಗಿ ಹೆಚ್ಚುವರಿ ಕಾರ್ಯಭಾರ ನೀಡಿ ಸರ್ಕಾರ ನ. 17 ನೇ ತಾರೀಖಿನಂದು ಆದೇಶ ಹೊರಡಿಸಿತ್ತು.
ವಿವಿಯ ಪ್ರಭಾರ ಕುಲಸಚಿವರಾಗಿದ್ದ ಪ್ರೊ ವಿ ಲೋಕೇಶ್ ಅವರು ಅಧಿಕಾರ ಹಸ್ತಾಂತರಿಸಿದರು.
