ಅನುದಿನ‌ಕವನ-೧೫೯ ಕವಯತ್ರಿ: ನಯನ ಮಲ್ಲಿನಾಥ ಸೋಗಿ, ಹೂವಿನ ಹಡಗಲಿ ಕವನದ ಶೀರ್ಷಿಕೆ: ಅಮ್ಮ

ಅಮ್ಮ
ಅಮ್ಮ ಎನುವ ಪದವೆ
ಅಮರ ಅನನ್ಯ
ನಿನ್ನ ಮಮತೆಗೆ ಮೊದಲೆಲ್ಲಮ್ಮ

ಅತ್ತಾಗ ಕಣ್ಣೀರೊರಸಿ
ನಕ್ಕಾಗ ನಗುವ ಸಖಿ
ನಿನ್ನಂತೆ ಆತ್ಮೀಯಳೆಲ್ಲುಂಟಮ್ಮ

ಹತ್ತು ಹಲವು ಗುರು ದೈವಕಿಂತ
ಹೆತ್ತವ್ವ ನೀ ಮೇಲವ್ವಾ
ಸರ್ವೇಶ್ವರಿ ನೀನಮ್ಮ

ಬೇಡದೆಯೇ ಅರಿತು ವರ ನೀಡಿ
ಮರುಇಚ್ಚಿಸದ
ಇಷ್ಟದೇವತೆ ನೀನಮ್ಮ

✍️ನಯನ ಮಲ್ಲಿನಾಥ ಸೋಗಿ
ಹೂವಿನ ಹಡಗಲಿ
*****

Leave a Reply

Your email address will not be published. Required fields are marked *