ನಿನ್ನ ಕಾಣುವ ಬೆಳಕು ಕತ್ತಲು ಕೇಳುವ ಶಬ್ದ ನಿರ್ವಾತ ನುಡಿಯಲಕ್ಷರ ಮರೆವು ಸೋಕುವ ತನು ಉರಿವ ಕರ್ಪೂರ ಇರುವುದೆಂಬುವ ಬೆಟ್ಟ ಕಂಗಳ ಗಂಟು ಬೆನ್ನಿನ ಹೊರೆ ಪಾದವೂರಲು ಹಾಸಿದ ನೆಲ ಮಂಜಿನ ಪೊರೆ ಒಡ್ಡಿರುವೆ ನೀನು ಸಕಲೇಂದ್ರಿಯಕೆ ಮೋಡಿ ಮೋಡಿಗಡಿಯಾಳ್ತನವ ಬೇಡಿ…
Category: ಅನುದಿನ ಕವನ
ಅನುದಿನ ಕವನ-೯೫೬, ಕವಿ:ಟಿ.ಪಿ ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ಸ್ವಾತಂತ್ರ್ಯದ ಗುರುತು
ಸ್ವಾತಂತ್ರ್ಯದ ಗುರುತು ಅರಳಿದ ಹೂಗಳ ಗಮನಿಸಿರಿ ಮಕ್ಕಳ ನಗುವ ಆಸ್ವಾದಿಸಿರಿ ರೈತರ ಮೈ ಬೆವರ ಸಹಿಸಿರಿ ಹೆಂಗಳೆಯರ ಮಾತ ಆಲಿಸಿರಿ ಮಣ್ಣ ಕಣಕಣ ಪೂಜಿಸಿರಿ ಸಿಗುವನು…. ಎಲ್ಲ ಗೆರೆಗಳಿಗೆ ಸಿಕ್ಕವನು ಎಲ್ಲ ಎಲ್ಲೆಗಳಿಗೆ ಕಾಣುವನು ಎಲ್ಲ ಮಿತಿಗಳಿಗೆ ಒಗ್ಗಿದವನು ಎಲ್ಲ ನೀರಿನಲಿ…
ಅನುದಿನ ಕವನ-೯೫೫ ಕವಿ:ಎಚ್.ಎನ್. ಈಶ ಕುಮಾರ್, ಮೈಸೂರು, ಕವನದ ಶೀರ್ಷಿಕೆ: ಬಯಲ ಬೆತ್ತಲು..
ಬಯಲ ಬೆತ್ತಲು.. ನೆನಪಿನ ಗೂಡು ಕಟ್ಟಿದ ಜೇನು ಉಂಡು ಸಿಹಿಯ ಮದವೇರಿ ಕಂಡ ಕಂಡ ಹೂವಿನ ಸವಿಯ ಜರಿಯುತ ಅಲೆದ ಅಲೆಮಾರಿಯ ಅಮಲು ಇಳಿಯಲು ಬಯಲಲಿ ಕಂಡ ತುಂಬೆಯ ಚೆಲುವು ದಾರಿಯ ದಣಿವ ತುಸು ತಣಿಸಿ ಮಬ್ಬು ಹಾದಿಯ ಮಸುಕ ತೆರೆಯಲು…
ಅನುದಿನ ಕವನ-೯೫೪, ಕವಿ: ಡಾ. ನಿಂಗಪ್ಪ ಮುದೆನೂರು, ಧಾರವಾಡ
ಜಾನಪದಶ್ರೀ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರ 9ನೇ ಸಂಸ್ಮರಣೆ ದಿನವಾದ ಇಂದು ಕವಿ ಡಾ.ನಿಂಗಪ್ಪ ಮುದೇನೂರು ಅವರು ಈ ಕವನದ ಮೂಲಕ ಸ್ಮರಿಸಿದ್ದಾರೆ. ಅಕ್ಷರ ನಮನ ಸಲ್ಲಿಸಿದ್ದಾರೆ.🙏🙏 ಮಣ್ಣ ಪಾದದ ತೇವವಿನ್ನೂ ಆರಿಲ್ಲ ತಾಯೇ ತಂಬೂರಿ ಮಿಡಿಯುತ್ತಲೇ ಇದೆ ಒಳಗು…
ಅನುದಿನ ಕವನ-೯೫೩, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ ಶೀರ್ಷಿಕೆ: ಹಗ್ಗ ಹೊಸೆಯುತ್ತೇನೆ
ಹಗ್ಗ ಹೊಸೆಯುತ್ತೇನೆ ನಾನೊಂದು ಹಗ್ಗ ಹೊಸೆಯತ್ತೇನೆ ಹೊಸೆದು ಮಾರಾಟ ಮಾಡುತ್ತೇನೆ ಅಷ್ಟೇ ಗೊತ್ತು ನನಗೆ ಯಾರ ಕೈಗೆ ಚಾಟಿಯಾಯಿತೋ ಯಾರ ಮೈ ಚರ್ಮ ಸುಲಿಯುತೋ ನನಗೇನು ಗೊತ್ತು.. ಯಾರ ಹಸಿವು ಹಿಂಗಿಸಿತೋ ಯಾರ ತೃಷೆಯ ನೀಗಿಸಿತೋ ಅದು ಹಗ್ಗಕ್ಕೇ ಗೊತ್ತು ಬಿದ್ದ…
ಅನುದಿನ ಕವನ-೯೫೨, ಕವಿಯಿತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನಾಲ್ಕು ಹನಿಗವನಗಳು
ನಾಲ್ಕು ಹನಿಗವನಗಳು 1. ನೂರು ಮಾತು ನಿನ್ನ ನೋಟದಲ್ಲಿ ನೂರು ಮಾತುಗಳ ಸಾಮರ್ಥ್ಯ ಅಡಗಿರುವಾಗ ಹುಡುಗಿ ! ನಾನು ಹತ್ತು ಮಾತನಾಡಿದರೂ ವ್ಯರ್ಥವೆನಿಸುತ್ತಿದೆ ನನಗೀಗ. 2. ಬಾಲೆ ನಾನೊಂದು ಬಿಳಿಹಾಳೆ ಅದರ ಮೇಲೆ ಬರೆಯದಿದ್ದರೆ ಏನು ಬೆಲೆ ? ; ನೀನೊಂದು…
ಅನುದಿನ ಕವನ-೯೫೧, ಕವಿ: ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಪ್ರೀತಿ ಎಂದರೆ ಸಾಕಿ…
ಪ್ರೀತಿ ಎಂದರೆ ಸಾಕಿ… ಸಾಕಿ.. ಪ್ರೀತಿ ಎಂದರೆ ಗುಟ್ಟಾಗಿ ಗುನುಗುವುದಲ್ಲ ಸುಟ್ಟ ರೊಟ್ಟಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಕಾದು ಕೆನೆಗಟ್ಟುವುದಲ್ಲ ಹೆಪ್ಪುಗಟ್ಟಿ ತುಪ್ಪದಂತಾಗುವುದು ಸಾಕಿ.. ಪ್ರೀತಿ ಎಂದರೆ ಹಾರಾಡುವುದಲ್ಲ ಫೀನಿಕ್ಸ್ ಹಕ್ಕಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಮಥಿಸುವುದಲ್ಲ ಮಾನವೀಯತೆಯ ಸ್ತುತಿಸುವುದು ಸಾಕಿ..…
ಅನುದಿನ ಕವನ-೯೫೦, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ
ಇಂದು ಏಕೋ ನೆನಪಾಗುತಿದೆ ಹಳೆಯ ನೋವಿನ ಅನುಭವ ಮರೆಯಲಾರೆನು ಎಂದೂ ನಾನು ಪಟ್ಟ ಕಷ್ಟನಷ್ಟವ ಮಾಯಲಾರದು ಅಷ್ಟು ಕ್ಷಿಪ್ರದಿ ಹೃದಯದಲಿ ಆದ ಗಾಯವು ನಲಿವೇ ಇಲ್ಲ ನೋವೇ ಎಲ್ಲ ನಿತ್ಯ ಕಂಬನಿ ಧಾರೆಯು ವಿಧಿಯು ಎನ್ನಲೇ, ಸೃಷ್ಟಿ ಎನ್ನಲೇ ತಿಳಿಯಲಾಗದು ಪಡೆದ…
ಅನುದಿನ ಕವನ-೯೪೯, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ (ನಭಾ), ಹುನಗುಂದ, ಕವನದ ಶೀರ್ಷಿಕೆ:ಲೇಪನ, ಚಿತ್ರಕೃಪೆ: ಯಜ್ಞ ಆಚಾರ್ಯ, ಮಂಗಳೂರು
ಲೇಪನ ಮೌನ ಎಂಬ ಚಿನ್ನದೊಳಗಡೆ ಎಷ್ಟು ಕುಲುಮೆಯ ಝಳವಿದೆ ಧರಿಸಿದೆದೆಯಾ ಸುಪ್ತದೊಳಗಡೆ ಅಳೆಯಲಾಗದ ಕೊಳವಿದೆ ಆಡಲಾರದ ಮಾತುಗಳೆಲ್ಲ ಹೆದರಿ ಮುದುರಿ ಕುಳಿತಿವೆ ಯಾವವಕಾಶಕೆ ಕಾಯುತ್ತಿದ್ದವೋ ಹಾರಿ ಹೋಗಿ ಬಿಟ್ಟಿವೆ ಹೇಳಲಾಗದ ಕಥೆಗಳಿಗೆಲ್ಲ ಯಾವ ದೈವ ಒಲಿಯಿತೋ ಯಾವ ಸ್ವರದ ಸ್ನೇಹವಾಯಿತೋ ರಾಗವಾಗಿ…
ಅನುದಿನ ಕವನ-೯೪೮, ಕವಿ: ಆರಿಫ್ ರಾಜಾ, ಇಳಕಲ್ಲು
ಕ್ರಾಂತಿಕಾರಿ, ಜನ ಕವಿ ಗದ್ದರ್ ಅವರು ಇನ್ನೂ ನೆನಪು ಮಾತ್ರ. ತಮ್ಮ ಹೋರಾಟದ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು. ಭೌತಿಕವಾಗಿ ನಮ್ಮನ್ನಗಲಿದ್ದರೂ ದೇಶದ ಕೋಟ್ಯಾಂತರ ಜನರ ಹೃದಯದಲ್ಲಿ ಸದಾ ಕ್ರಾಂತಿ ಗೀತೆಯ ಕಹಳೆ ಮೊಳಗಿಸುತ್ತಾ ಅಚ್ಚಹಸಿರಾಗಿರುತ್ತಾರೆ. ಕವಿ ಆರಿಫ್ ರಾಜಾ…
