ರೂಪವ ಕಾಣಲು ಹೋದರೆ ಪಾತ್ರವೋ ಪಾತ್ರವ ಕಾಣಲು ಹೋದರೆ ವೇಷವೋ ವೇಷವ ಕಾಣಲು ಹೋದರೆ ಅವತಾರವೋ ಅವತಾರವ ಕಾಣಲು ಹೋದರೆ ಆಕಾರವೋ ಆಕಾರವ ಕಾಣಲು ಹೋದರೆ ವಿಕಾರವೋ ಎಲ್ಲೋ ಬೀಸಿದ ಗಾಳಿಯು ಇನ್ನೆಲ್ಲೋ ಹಚ್ಚಿದ ದೀಪವ ಆರಿಸಿದರೆ ಗಾಳಿಯ ಉಸಿರಿಗೇನು ಅರ್ಥ?…
Category: ಅನುದಿನ ಕವನ
ಅನುದಿನ ಕವಿತೆ-೭೮೯, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ….!
ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ….! ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ ನಿನ್ನ ಬಿರುಸು ಕಣ್ಣೋಟದ ಕಿಡಿವೊಂದು ತಾಕಿದ ಘಳಿಗೆಯಿಂದ…. ನಿನ್ನನ್ನೆ ಧ್ಯಾನಿಸುತ್ತ ನಾನಿಲ್ಲಿ ಮೇಣದಂತೆ ಕರಗುತ್ತಿದ್ದೇನೆ… ನೀನು ನಶೆಯೋ ಪ್ರೇಮದ ಪಾಶೆಯೋ ಯಾವುದು ನನಗೀಗ ತಿಳಿಯದ ಮತಿಭ್ರಮೆ ಅಂತೂ ನಾನೀಗ ಸವೆಯುತ್ತಿದ್ದೇನೆ ನನ್ನೊಟ್ಟಿಗೆ ಹೆಜ್ಜೆ ಇಟ್ಟ ಪಾದರಕ್ಷೆಯಂತೆ……
ಅನುದಿನ ಕವನ-೭೮೮, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ:ಗಜಲ್
ಗಜಲ್ ಎಷ್ಟು ಹೇಳಿದರು ಸಿಟ್ಟು ಮಾಡ್ಕೊಂಡು ಎದ್ದು ಹೋಗಬ್ಯಾಡ ಸುಮ್ನಿರು ಗಂಟಲ್ದಾಗ ನರ ಕಿತ್ತು ಹೋಗಂಗ ಕೂಗಬ್ಯಾಡ ಸುಮ್ನಿರು ಒಂದ ಮಾತಿಗೆ ಬ್ಯಾಸರ ಮಾಡ್ಕೊಂಡು ಮುಖ ಗಂಟಾಕಿ ಕುಂತ್ಯಾಕ ಊರ ಮಂದಿ ಕರುದು ಪಂಚಾಯ್ತಿ ಕೂಡ್ಸಬ್ಯಾಡ ಸುಮ್ನಿರು ಮಲ್ಲಿಗಿ ಹೂವ ಮೈಸೂರು…
ಅನುದಿನ ಕವನ-೭೮೭, ಕವಿ:ಮಧುಸೂದನ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ:ಅವನೊಂದಿಗೆ ‘ಒಂದು ಸೆಲ್ಫಿ’
ಅವನೊಂದಿಗೆ ‘ಒಂದು ಸೆಲ್ಫಿ’ ಅಪರೂಪಕ್ಕೆ ಸಿಕ್ಕ ಬಾಲ್ಯದ ಗೆಳೆಯನೊಂದಿಗೆ ಸಾವಿರ ನೆನಪುಗಳ ಕುರಿತ ಹರಟೆ ಹೊಡೆದದ್ದೇ ಹೊಡೆದದ್ದು. ನದಿಯಲ್ಲಿ ಈಸು ಬಿದ್ದದ್ದು, ಮಾಸ್ತರು ಹೂಸು ಬಿಟ್ಟದ್ದು, ಮನೆಯಲ್ಲಿ ಕಾಸು ಕದ್ದದ್ದು ಹೀಗೆ ಬಾಲಕರಾಗಿ ಮೆರೆದಿದ್ದೆವು.. ಪಾಪ ಈಗಾಗಲೇ ಮದುವೆ, ಮಕ್ಕಳು ಅಂತ…
ಅನುದಿನ ಕವನ-೭೮೬, ಕವಿಯಿತ್ರಿ: ಶೋಭ ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಭಾವಾಂತರಂಗ
ಕರ್ನಾಟಕ ಕಹಳೆ ಡಾಟ್ ಕಾಮ್ ಸಾಹಿತ್ಯ ಬಳಗದಲ್ಲಿ ಸದಾ ಸಕ್ರೀಯರಾಗಿರುವ ಹೂವಿನಹಡಗಲಿಯ ಕವಿಯಿತ್ರಿ ಶ್ರೀಮತಿ ಶೋಭ ಪ್ರಕಾಶ್ ಮಲ್ಕಿಒಡೆಯರ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಿಕೊಂಡಿದ್ದಾರೆ. ಸೋಗಿಯಲ್ಲಿ ಜರುಗಿದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಪತಿ, ಹಿರಿಯ ಸಾಹಿತಿ ಪ್ರಕಾಶ್ ಮಲ್ಕಿಒಡೆಯರ್ ಅವರೊಂದಿಗೆ…
ಅನುದಿನ ಕವನ-೭೮೫, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
ಉಸಿರಾಡುತ್ತಿರುವ ಮೌನದಲಿ ಕಣ್ರೆಪ್ಪೆ ಸದ್ದಿಲ್ಲದೆ ಬಾಗಿ ಮೈಗಂಧವ ತೀಡಿ ನಿನ್ನ ಸನಿಹ ತಂದವು ಹೊರಗೆ ಸುಳಿಯುವ ಗಾಳಿಗೆ ನಮ್ಮ ಮಾತ ಬಿಟ್ಟು ಸ್ಪರ್ಶದಗ್ನಿಗೆ ಮೈಗೊಟ್ಟು ಬಾ ಹೊರಳುತ ಹೂಬುಟ್ಟಿಗಳಾಗೋಣ ಇಬ್ಬರೊಳಗೂ ಹೊಂಚಿ ಕೂತ ಸಾವು ನಮ್ಮ ಸಂಗದುನ್ಮಾದ ನೋಡಿ ಕೊಂಚ ದೂರ…
ಅನುದಿನ ಕವನ-೭೮೪, ಕವಿ:ಟಿ.ಎಂ.ನಾಗಭೂಷಣ, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಂಸಾರವೆಂಬುದು….
ಸಂಸಾರವೆಂಬುದು…. ಸರಿಗಮಪ ಅಲ್ಲ ಸಂಸಾರ ಪತಿಯೆಂದರೆ ಪರಿಚಾರಕನಲ್ಲ ಸತಿಯೆಂದರೆ ಸೇವಕಿಯಲ್ಲ ಹಿರಿಯರ ನಾಣ್ಣುಡಿಯಷ್ಟೆ ಪತಿ ಮನೆಯ ಹೊರಗೆ ಯಜಮಾನ ಸತಿ ಪತಿಗೂ-ಮನೆಗೂ ಯಜಮಾನಿ ಮನೆಯ ಹೊರಗೆ ಅವಳು ಮೌನಿ ಒಳಗೆ ದುರ್ಗೆಯ ಅವತಾರ ನೀ ಬಲ್ಲೆಯೆಲ್ಲ ಬಂದಥಿಗಳಿಗೆ ಚಾ ಕಾಫಿ ಮಾಡುವುದು…
ಅನುದಿನ ಕವನ-೭೮೩, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಕಿತ್ತೋದ್ ಪ್ರೀತಿ
ಕಿತ್ತೋದ್ ಪ್ರೀತಿ ಬಾನ ದಾರಿಯಲ್ಲಿ ಅವಳು ಅಲ್ಲೆಲ್ಲಿ ದಾರಿ ಅಂತ ಅವನು ಹೂವಿನ ನಗುವಲ್ಲಿ ನಾನು ಹೂವೆಲ್ಲಿ ನಗುತೈತೆ ಅಂತ ಅವನು ಎಲ್ಲೆಲ್ಲು ನೀನೆ ನನ್ನಲ್ಲು ನೀನೆ ಎನ್ನುವ ಅವಳು ನನ್ ಮನೆಲಿ ನಾನು ನಿನ್ ಮನೆಲಿ ನೀನು ಎನ್ನೋ ಅವನು…
ಅನುದಿನ ಕವನ-೭೮೨, ಕವಿಯಿತ್ರಿ; ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮೌನ ಮಾತಾದಾಗ
ಮೌನ ಮಾತಾದಾಗ ದಿಗ್ಭ್ರಮೆಗೊಳಿಸಿದೆ ಮೌನ ಪಾದುಕೆಯ ಗಾಲಿಯು ಖಾಲಿ ಟಾರು ರೋಡಲಿ ವೇಗದಿ ಸಾಗಲು,, ಗುಯ್ ಗುಟ್ಟಿದೆ ಮನದ ರಾಗ.. ಸುತ್ತಲೂ ಸ್ತಬ್ದ ಅದರೊಳು ಗಮನಿಸಿದೆ ನ್ಯಾಯದ ಕಳವಳ ಬೈಗುಳದ ಹೊಸ್ತಿಲಲಿ ಅನ್ನ್ಯಾಯದ ನಾಣ್ಯ, ಇದಕೆ ಮೈ ತುಂಬಿದ ಲತೆಯ ಬಳ್ಳಿ…
ಅನುದಿನ ಕವನ-೭೮೧, ಕವಯತ್ರಿ: ಕೆ. ಪಿ. ಮಹದೇವಿ. ಅರಸೀಕೆರೆ, ಕವನದ ಶೀರ್ಷಿಕೆ: ಪ್ರೀತಿಯ ನೆಲೆ
ಪ್ರೀತಿಯ ನೆಲೆ ಆಚಾರದರಸುಗಳಾಗಿ ಕದಳಿವನದ ಹಾದಿ ಹಿಡಿದವರು ಕೇದಗೆಯ ಬನವ ಮೆಟ್ಟಿ ಮಲ್ಲಿಗೆ ಸಂಪಿಗೆಯ ತೋಟಗಳ ದಾಟಿ ಚರಾಚರದ ಸೀಮೆಯ ಮೀಟಿ ಆತ್ಮದ ಸ್ತಂಭವನಿಡಿದು ಸ್ಥಿರವಾಗುವಾಗ ಪ್ರೀತಿಯ ಅಲೆಯೇ ಭಕ್ತಿರಸವಾಗಿ ಉಕ್ಕಿಉಕ್ಕಿ ಹರಿದದ್ದು. ಯುದ್ಧ ಗದ್ದಲಗಳ ಸದ್ಹಡಗಿ ಮದ್ದಿಟ್ಟ ನೆಲದಲ್ಲೂ ,…
