ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು ವಿವಿಧ ವಿಶಯಗಳ ವಿಶ್ವವಿದ್ಯಾಲಯಗಳಲ್ಲಿ ಕಲಿತವಳಲ್ಲ ಜನಮನವ ತಿಳಿದು ವಿಶ್ವಾಸದಿ ವಿಶ್ವವನ್ನೆ ಅರಿತವಳು ನನ್ನ ಮನದ ಆಳ ಅಗಲಗಳ ಇಂಚಿಂಚೂ ಅಳೆದವಳು ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು…
Category: ಅನುದಿನ ಕವನ
ಅನುದಿನ ಕವನ-೬೦೫, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳ ನೆನಪು… ಚಿತ್ರ: ಆಶಾ ಎಸ್
ಅವಳ ನೆನಪು…….. ಅವಳ ನೆನಪುಗಳೇ ಹಾಗೆ- ಆಗಸದಿಂದ ಬಿಡದೆ ಸುರಿವ ಹನಿಗಳಂತೆ ! ಅಡಿಯಿಂದ ಮುಡಿಯವರೆಗೆ ತೋಯ್ದರೂ ಬೆಚ್ಚನೆ ರೋಮಾಂಚನ ಮೈಯ ಪ್ರತಿ ಕಣದೊಳಗೂ ಮೋಡಗಳ ಸ್ಪರ್ಶ ಮೊದಲ ಮಳೆಗೆ ನೆಲದಿಂದ ಮೇಲೆದ್ದ ಘಮಲಿನ ಹೂಬನ ನೆಲಕೆ ತಾಕುವ ಹನಿಗಳ ತಂತನನ…
ಅನುದಿನ ಕವನ-೬೦೪, ಕವಯತ್ರಿ: ಅನ್ನಪೂರ್ಣ ಪದ್ಮಶಾಲಿ, ಕೊಪ್ಪಳ, ಕವನದ ಶೀರ್ಷಿಕೆ: ವಾಸ್ತು ತೊರೆದ ವಾಸ್ತವ
ವಾಸ್ತು ತೊರೆದ ವಾಸ್ತವ ವಿಜ್ಞಾನ ಜಗತ್ತು ಜ್ಞಾನವಂತರ ಸೊತ್ತು ಬಿಡು ನೀ ವಾಸ್ತು… ವಾಸ್ತು. ವೈಜ್ಞಾನಿಕ ಮನೋಭಾವ ಅರಿತು! ಸಿಲುಕದಿರು, ಅಂಜದಿರು ವಾಸ್ತುವಿನ ಭಯಕ್ಕೆ.,! ಭೂಗೋಳವಿದು, ಭೂಮ್ಯಾಕಾರವಾಗಿದೆ..!!! ಭೂಮಿಗಿದೆಯೇ ವಾಸ್ತು..?? ದಿನದಿನವೂ ಕ್ಷೀಣಿಸುತ್ತಿದೆ ಶಾಂತಿಯ ಮನಸ್ಸು ಜನಮನದಿ ಬರಿ ಒಳಸಂಚು ವೈಮನಸ್ಸು…
ಅನುದಿನ ಕವನ-೬೦೩, ಕವಿ: ಹೊಳಗುಂದಿ ಎ.ಎಂ.ಪಿ ವೀರೇಶಸ್ವಾಮಿ, ಬಳ್ಳಾರಿ, ಕವನದ ಶೀರ್ಷಿಕೆ: ಬಿಕ್ಷುಕರು ನಾವು
ಬಿಕ್ಷುಕರು ನಾವು. ಪರಿಸರದ ಸಿರಿಯ ಅಂಗಳದಿ ದುರಾಸೆಯ ಗಂಗಾಳ ಹಿಡಿದ ಬಿಕ್ಷುಕರು ನಾವು ಕಾಮಧೇನುವದುವೆಂದು ಬಗೆದು ಹಾಲು ಮುಗಿದರು ರಕ್ತ ಹಿಂಡುವ ಖೂಳ ರಕ್ಕಸರು ನಾವು ಕಲ್ಪವೃಕ್ಷದ ಹೂ ಹಣ್ಣು ಕಾಯಿ ಎಲೆ ಕಿತ್ತು ಬರಿದಾದರು ಬಿಡದೆ ಬೇರ ಕೀಳುವ ಮಹಾ…
ಅನುದಿನ ಕವನ-೬೦೨, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಪ್ರೇಮದ ಪರಿ ಪರಿ…
“ಇದು ಪ್ರೇಮದ ಪರಿ ಪರಿ ಸ್ಫುರಣಗಳ ಸುಂದರ ಕವಿತೆ. ಅನುರಾಗದ ಅನುಪಮ ಸ್ವರಗಳ ಮಧುರ ಭಾವಗೀತೆ. ಓದಿ ನೋಡಿ.. ಮನವರಳಿಸಿ ಮುದನೀಡಿ ಮಾರ್ದನಿಸುತ್ತದೆ. ಏಕೆಂದರೆ ಇಲ್ಲಿ ಸೆಳೆಯುವ ಭಾವಕಿರಣಗಳ ಸೌಂದರ್ಯವಿದೆ. ಕಚಗಳಿಯಿಡುತ ಕುಣಿಸುವ ಜೀವಸಂವೇದನೆಗಳ ಮಾಧುರ್ಯವಿದೆ” ಎಂದು ಹೇಳುತ್ತಾರೆ ಕವಿ ಎ.ಎನ್.ರಮೇಶ್.…
ಅನುದಿನ ಕವನ-೬೦೧, ಹಿರಿಯ ಕವಿ: ಲಿಂಗಾರೆಡ್ಡಿ ಶೇರಿ, ಸೇಡಂ, ಕವನದ ಶೀರ್ಷಿಕೆ: ಇವನು ಅವನಲ್ಲ…..
ಇವನು ಅವನಲ್ಲ ಅಂದು ಕಳೆದು ಹೋದವನು ಇಂದು ಸಿಕ್ಕಿದ್ದಾನೆ. ಆದರೆ ಇವನು ಅವನಲ್ಲ! ಅಂದು ಕಳೆದು ಹೋದವನ ಮುಖದಲ್ಲಿತ್ತು ಇಂದು ಕಳೆ. ಬೆಳ್ಳಗೆ ನಗುತ್ತಿದ್ದ, ಇಂಪಾಗಿ ಹಾಡುತ್ತಿದ್ದ, ಜಿಂಕೆಯಂತೆ ಓಡಾಡುತ್ತಿದ್ದ, ಹಕ್ಕಿಯಂತೆ ಹಾರಾಡುತ್ತಿದ್ದ. ಇವನು ಅವನಲ್ಲ. ಅವನಲ್ಲಿ ಕನಸುಗಳಿದ್ದವು ಹುಡುಕುತ್ತಿದ್ದ ಭರವಸೆಯಿಂದ.…
ಅನುದಿನ ಕವನ-೬೦೦, ಕವಯತ್ರಿ: ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ್, ಬೆಳಗಾವಿ ಕವನದ ಶೀರ್ಷಿಕೆ: ಅಲ್ಲಮನಾಗುವುದಾದರೆ….
ಅಲ್ಲಮನಾಗುವುದಾದರೆ……… ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ. ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ . ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ…
ಅನುದಿನ ಕವನ-೫೯೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶಿಲಾಬಾಲಿಕೆ
ಶಿಲಾಬಾಲಿಕೆ ಏನೆಂದು ವರ್ಣಿಸಲಿ ! ನಿನ್ನ……. ಗೆಳತಿ ಯಾವ ಸೌಂದರ್ಯದ ಹೋಲಿಕೆ ಮಾಡಲಿ ! ನಿನ್ನ ಸುಂದರ ಮೊಗವನ್ನು ಬೆಳದಿಂಗಳ ಚಂದ್ರನಿಗೆ ಹೋಲಿಸಲೇ……? ಚಂದ್ರ ರಾತ್ರಿ ಕಳೆದು ಬೆಳಗು ಸರಿದು ಹೋಗುವುದು // ನಿನ್ನ ಸುಂದರ ನಗುವನ್ನು ಅರಳಿದ ಹೂಗಳಿಗೆ ಹೋಲಿಸಲೇ…..?…
ಅನುದಿನ ಕವನ-೫೯೮, ಕವಿ:ಸಖ, ಶಿಡ್ಲಘಟ್ಟ, ಕವನದ ಶೀರ್ಷಿಕೆ: ಆಸೆ
ಆಸೆ ತೆಪ್ಪಗೆ ನಾನು ನನ್ನ ಪಾಡಿಗೆ ಯಾರ ಆಸರೆಗೂ ಹಾತೊರೆಯದೇ ಯಾರ ನಿರ್ಲಕ್ಷ್ಯಕೂ ನೋಯದೇ ಅವರ ಪಾಡಿಗೆ ಅವರ ಬಿಟ್ಟು ನನ್ನ ಹಾಡಿಗೆ ನಾನು ತಲೆದೂಗಬೇಕು ಅಟ್ಟಹಾಸಗಳಿಗೆ ಕಿವುಡಾಗಿ ಅಹಂಕಾರಗಳಿಗೆ ಕುರುಡಾಗಿ ಅಸೂಯೆಗಳಿಗೆ ಕಣ್ಣು ಹೊಡೆದು ನನ್ನ ಮನದ ಮಾತುಗಳಿಗೆ ಮೌನ…
ಅನುದಿನ ಕವನ-೫೯೭, ಕವಿ:ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಸಂಗಾತಿಯ ಗುರುತು
ಸಂಗಾತಿಯ ಗುರುತು ಕಾರ್ತೀಕದ ಹಸಿರು ಪಸಲಿನ ಅಕ್ಕಡಿ ಸಾಲಿನಲ್ಲಿ ಅರಳಿ ನಗುವ ಹಚ್ಚೆಳ್ಳು ಹೂವೇ ! ಸೀಳುಕ್ಕೆಯ ದೋಣಿ ಗೆರೆಯಲ್ಲಿ ಅನಂತ ನೆರಿಗೆ ಸೀರೆಯನುಟ್ಟು ಬೆಳ್ಳಗೆ ನಕ್ಷತ್ರದಂತೆ ನಗುವ ಹೆದ್ದಣಬೆಯೇ ! ಉರಿಬಿಸಿಲ ನೆತ್ತಿ ಬಂಪಿಗೆ ಅರಳೆಲೆ ಆಸರೆ ಮೇಲುಮುಸುಗಿನ ತಣ್ಣನೆಯ…
