ಅನುದಿನ ಕವನ-೫೬೭, ಕವಿ:ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ನಾ… ಹೂವಾಗಬೇಕಿತ್ತು!

ನಾ….ಹೂವಾಗಬೇಕಿತ್ತು! ನಾನು ಹೀಗೆ ಹೂವಾಗಿ ಹುಟ್ಟಬೇಕಿತ್ತು ಮುಂಜಾನೆ ಅರಳಿ ಮಧ್ಯಾಹ್ನ ಘಮಿಸಿ ನಾರಿಯ ಮುಡಿಗೋ? ದೇವರ ಗುಡಿಗೋ ಮೀಸಲಾಗಿ, ಇಲ್ಲವಾದರೆ ಸಂಜೆ ತನಕ ಎಲ್ಲರ ನೊಟಕ್ಕೆ ಸಿಲುಕಿ ಬದುಕ ಮುಗಿಸಿ ಧನ್ಯನಾಗಿಬಿಡುತಿದ್ದೆ..! -ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ *****

ಅನುದಿನ ಕವನ-೫೬೬, ಕವಿ: ಮಧುಸೂದನ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ಅವಳ ಸ್ವಗತ

ಅವಳ ಸ್ವಗತ ‘ನೀನು ಮೊದಲು ಹೀಗಿರಲಿಲ್ಲ’… ಪ್ರತಿ ಮಾತಿಗೂ ತಲೆಯಾಡಿಸುವ ಬಸವನಂತೆ, ಪ್ರತಿ ಮುಂಜಾನೆ ಅರಳುವ ಪ್ರಫುಲ್ಲ ಹೂವಿನಂತೆ ಸದಾ ನಗುತ್ತಿರುತ್ತಿದ್ದೆ ಎಂದಿಗೂ’ ಉಹೂಂ ‘ಎಂದವನೇ ಅಲ್ಲ. ‘ನೀನು ಮೊದಲು ಹೀಗಿರಲಿಲ್ಲ’… ನನ್ನ ಹಾಡಿನ ದನಿಗೆ ಕಿವಿಯಾಗುತ್ತಿದ್ದೆ ನಾನು ಅಗತ್ಯವಿಲ್ಲದೆಯೂ ಸತಾಯಿಸುತ್ತಿದ್ದೆ,…

ಅನುದಿನ ಕವನ-೫೬೫, ಕವಿ: ಮಹಿಮ, ಬಳ್ಳಾರಿ

ಅವಳನ್ನು ಹುಡುಕುತ್ತಲೇ ಇರುವೆ ಮತ್ತೆ ಮತ್ತೆ ಮೊದಲ ಬಾರಿಗೆ ನನ್ನ ಪ್ರೀತಿಸಿದವಳ ಅವಳೆಲ್ಲಿ ಕಾಣಿಸುತ್ತಲೇ ಇಲ್ಲ ಎಲ್ಲಿಗೆ ಹೋದಳೋ ಏನೋ? ಎಷ್ಟೋ ವರ್ಷಗಳಾದವು? ಎಲ್ಲಿರುವಳೋ ಏನೋ? ಹೆಣ್ಣಾದವಳಿಗೆ ಬಯಸಿದ್ದು ಸಿಗದು ಗಂಡಸಿನ ಅಡಿಯಾಳಾಗಿ ಜೀತದಾಳಾಗಿ ಎಲ್ಲಿರುವಳೋ ಏನೋ? ನಾನು ಅವಳಿಗೆ ನೆನಪಾದರೂ…

ಅನುದಿನ‌ ಕವನ-೫೬೪, ಕವಿ: ಎ.ಎನ್.ರಮೇಶ್ ಗುಬ್ಬಿ., ಕವನದ ಶೀರ್ಷಿಕೆ: ನಿತ್ಯಸತ್ಯ ವಾಸ್ತವ!

“ಇದು ಪ್ರಶಸ್ತಿ ಪುರಸ್ಕಾರಗಳೆಂಬ ಭ್ರಮೆ ಕಳಚಿ ವಾಸ್ತವ ಬಿಚ್ಚಿಡುವ ಕವಿತೆ. ಸಾಧನೆಯ ಹಾದಿಗೆ ಸ್ಫೂರ್ತಿಯಾಗುವ ಬೆಳಕಿನ ಭಾವಗೀತೆ. ಸನ್ಮಾನ ಸತ್ಕಾರಗಳ ಮೂಲ ಉದ್ದೇಶ ನಡೆವ ಹೆಜ್ಜೆಗಳಿಗೆ ಹುರುಪು ತುಂಬುವುದೇ ವಿನಹ ಮೈಮರೆಸುವುದಲ್ಲ. ಲೋಕ ಸನ್ಮಾನಿಸುವುದು ನಿಮ್ಮ ಕಾಯಕವನ್ನಷ್ಟೇ ವಿನಹ ಕಾಯವನ್ನಲ್ಲ. ಹೊಗಳಿಕೆಗೆ…

ಅನುದಿನ ಕವನ-೫೬೩, ಕವಿ: ಅನಾಮಿಕ ಕನ್ನಡಕ್ಕೆ:ಮಂಜುಳಾ ಕಿರುಗಾವಲು, ಮಂಡ್ಯ

ನನ್ನ ಮನೆಯ ಪ್ರತಿ ಮೂಲೆಯಲ್ಲೂ ನಿನ್ನ ನೆನಪಿನ ರಾಶಿಗಳು ಹರಡಿರುವೆ ಯಾರಾದರೂ ಮನೆಗೆ ಬಂದಾಗ ಕೇಳುತ್ತಾರೆ ಇವೆಲ್ಲಾ ಯಾರ ವಸ್ತುಗಳು ಎಂದು…! ನಾನು ನಗುತ್ತಲೇ ಹೇಳುತ್ತೇನೆ ಇವೆಲ್ಲಾ ನನ್ನ ನೆನಪುಗಳು… ಮತ್ತೇ ಈ ನೆನಪುಗಳ ಮೇಲ್ಯಾಕೆ ಇಷ್ಟು ಧೂಳು ಅಂಟಿದೆ ಎನ್ನುತ್ತಾರೆ…

ಅನುದಿನ ಕವನ-೫೬೨, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಬಣ್ಣದ ಚಿಟ್ಟೆ

ಬಣ್ಣದ ಚಿಟ್ಟೆ ರಂಗು ರಂಗಿನ ಹಾರುವ ಚಿಟ್ಟೆ ಅಂದ ಚೆಂದದ ಬಣ್ಣದ ಚಿಟ್ಟೆ| ಹೂವಿಂದ ಹೂವಿಗೆ ಹಾರುವ ಚಿಟ್ಟೆ ಸವಿಯನು ಹೀರಿ ಪಕಳೆಯ ಅರಳಿಸಿ| ಒಲವಿನ ಮುತ್ತನು ಸುರಿಸುವ ಚಿಟ್ಟೆ ನಲಿಯುತ ನಗುತಲಿ ಬದುಕುವ ಚಿಟ್ಟೆ| ಮಕ್ಕಳಿಗಂತು ಪ್ರೀತಿಯ ಪತಂಗ ಬಯಸುತ…

ಅನುದಿನ ಕವನ-೫೬೧, ಕವಿ: ಎಂ.ಎಂ.ಶಿವಪ್ರಕಾಶ್, ಹಂಪಿ ಕನ್ನಡ ವಿವಿ, ಕವನದ ಶೀರ್ಷಿಕೆ: ತಾಯಿ ತುಂಗಭದ್ರೆ, ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ

ತಾಯಿ ತುಂಗಭದ್ರೆ ಶತಶತಮಾನಗಳಿಂದ ಹಂಪಿಯ ಕಿಷ್ಕಿಂದ ಆಂಜನಾದ್ರಿಗಳ ನಡುವೆ ಹರಿಯುತ್ತಿದ್ದಾಳೆ.ಆಶ್ವಿನಿ ರೋಹಿಣಿ ಕೃತಿಕಗಳಿಗೆ ಕೇಕೆ ಹಾಕುತ್ತಾಳೆ .ಮೈದಡುವುತ್ತಾಳೆ ಬೆಟ್ಟ,ಬಂಡೆ ಮಂಟಪ,ಗುಡಿ ಗುಂಡಾರಗಳನ್ನು,ಬಾಚಿಕೋಳ್ಳುತ್ತಾಳೆ ಮನೆ ಮಠ ಜೋಪಡಿಗಳನ್ನು. ಕಣಕಣದಲ್ಲೂ ಬಿಸಿಲ ತಣಿಸುವ ಬಂಡೆಗಳ ಮೇಲೆ ಕಾಲಿಟ್ಟರೆ ಪಾತಾಳ ನಾಭಿಸುಳಿ ಚಕ್ರತೀರ್ಥ.ತಲೆದೂಗುತ್ತಾಳೆ ಪಚ್ಚನೆಯ ಪಯಿರಾಗಿ,ಬಾಳೆಗೊನೆಗಳಿಗೆ…

ಅನುದಿನ ಕವನ-೫೬೦, ಕವಿ: ಡಾ. ಸಂಗಮೇಶ ಎಸ್. ಗಣಿ, ಹೊಸಪೇಟೆ, ಕವನದ ಶೀರ್ಷಿಕೆ: ಸುಮ್ಮನಿರದ ಕವಿತೆ

ಸುಮ್ಮನಿರದ ಕವಿತೆ ನಾನೂ ಮೌನವಾಗಿರಬೇಕೆಂದಿದ್ದೇನೆ ಸುಮ್ಮನಿರದೆ, ಮಾತಿನ ಯುದ್ಧಕೆಳೆಯುತಿದೆ ಈ ಲೋಕ… ಶಾಂತಿನಿವಾಸದ ಕನಸ ಕನವರಿಕೆಯಲಿರುವಾಗ ಬಂದೂಕು ಬಾಯಿತೆರೆದು, ಬಾಂಬ್ ಸಿಡಿದು ಕನಸ ಛಿದ್ರವಾಗುವುದ ಕಂಡು ಏನೊ ತಳಮಳ, ಎಂಥದೊ ಕಳವಳ…. ನೆಲಕ್ಕೆ ಬಿದ್ದ ಬೀಜ ಮೊಳಕೆಯೊಡೆವಾಗ ಶಾಂತಿಮಂತ್ರದ ಪಠಣ. ಮನದೊಳಗೆ…

ಅನುದಿನ ಕವನ-೫೫೯, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅತಿವೃಷ್ಟಿ

ಅತಿವೃಷ್ಟಿ ಕನಸುಗಳು ಕಣ್ತುಂಬ ನೂರಾರು ಕಣ್ಮುಚ್ಚಿ ತೆಗೆಯಲು ಬರೀ ನೀರೇ ನೀರು ಆಪತ್ಕಾಲಕ್ಕೆ ಆಗುವುದೇ ಸರ್ಕಾರ ಬರೀ ಆಶ್ವಾಸನೆ ಕೊಡಬೇಡಿ ಭರಪೂರ ! ಅತಿವೃಷ್ಟಿಯಿಂದ ಆಗಿದೆ ಎಲ್ಲೆಲ್ಲೂ ತಲ್ಲಣ ಆರ್ಭಟಿಸುತ್ತಿದೆ ರುದ್ರ ನರ್ತನ ಭೂಕುಸಿತದ ಭಯ ಕಂಪನ ಪ್ರಕೃತಿಯ ವಿಕೋಪಕ್ಕೆ ತತ್ತರಿಸುತ್ತಿದೆ…

ಅನುದಿನ ಕವನ-೫೫೮, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ನಿಲ್ಲಿಸು ನೋಯಿಸುವ ಆಟ

ನಿಲ್ಲಿಸು ನೋಯಿಸುವ ಆಟ 👇 ನೋಯಿಸುವ ಆಟ ನಿಲ್ಲಿಸಿಬಿಡು ಗೆಳೆಯ…. ಇಲ್ಲವಾಗಿಸುವವರು ಎಂದಿಗೂ ಉಳಿದಿಲ್ಲ ಇತಿಹಾಸದ ಪುಟಗಳಲ್ಲಿ. ಯಾರನ್ನು ಉಳಿಸುತ್ತೇನೆ ಎಂಬ ಪಣ ತೊಟ್ಟಿರುವೆಯೋ ಅದು ನಿನ್ನ ಉಳಿಸಿದರೆ ಸಾಕು. ‘ಕೊಂದು ಕಾಯು ನನ್ನ’ ಎಂದು ಯಾವ ಧರ್ಮವೂ ಪಿಸುಗುಟ್ಟಿಲ್ಲ…. ತಬ್ಬಿದರೆ…