ನಿಲ್ಲಿಸು ನೋಯಿಸುವ ಆಟ 👇 ನೋಯಿಸುವ ಆಟ ನಿಲ್ಲಿಸಿಬಿಡು ಗೆಳೆಯ…. ಇಲ್ಲವಾಗಿಸುವವರು ಎಂದಿಗೂ ಉಳಿದಿಲ್ಲ ಇತಿಹಾಸದ ಪುಟಗಳಲ್ಲಿ. ಯಾರನ್ನು ಉಳಿಸುತ್ತೇನೆ ಎಂಬ ಪಣ ತೊಟ್ಟಿರುವೆಯೋ ಅದು ನಿನ್ನ ಉಳಿಸಿದರೆ ಸಾಕು. ‘ಕೊಂದು ಕಾಯು ನನ್ನ’ ಎಂದು ಯಾವ ಧರ್ಮವೂ ಪಿಸುಗುಟ್ಟಿಲ್ಲ…. ತಬ್ಬಿದರೆ…
Category: ಅನುದಿನ ಕವನ
ಅನುದಿನಕವನ-೫೫೭, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು👇 ೧ ಗೆದ್ದೆತ್ತು ಬಾಲ ಹಿಡಿದವರು; ಗೂಳಿ ಬಿದ್ದಾಗ ಕಲ್ಲು ೨ ಬುದ್ಧನಾಗಲು ನಿರ್ಧರಿಸಿದಾಗೊಮ್ಮೆ ನೀ ಅಡ್ಡ ಬಂದೆ! ೩ ಗುಡ್ಡದೆದುರು ನಿಂತು ಕೂಗಿದ ಶ್ವಾನ ಕುಸಿದು ಬಿತ್ತು ೪, ವಾಸ್ತುದೋಷಕೆ ಮನೆ ಬಿಟ್ಟರು; ಇಲಿ ಹೆಗ್ಗಣ ವಾಸ ೫ ವಸಂತಳಿಗೂ…
ಅನುದಿನ ಕವನ-೫೫೬, ಕವಯತ್ರಿ: ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ, ಕವನದ ಶೀರ್ಷಿಕೆ: ಬರೆಸಿಕೊಂಡ ಸಾಲುಗಳು
ಬರೆಸಿಕೊಂಡ ಸಾಲುಗಳು ನನ್ನ ಮೇಲೆ ಕರುಣೆ ತೋರಬೇಕಿಲ್ಲ ಶವದ ಮುಂದೆ ಸೋಬಾನೆ ಹಾಡಬೇಡ ನಾನೀಗ ಅಲೆಮಾರಿ ಇಷ್ಟುದಿನ ನನ್ನವನಿಗಾಗಿ ಹುಡುಕುತ್ತಿದ್ದೆ.. ಈಗ ಅವನು ಅಲೆಮಾರಿ ನಾ ಬದುಕ ಬೇಕೆಂಬ ಬಯಕೆ ನಿನಗಿದ್ದರೆ .. ಈಗ ಉಣಿಸಿದ ವಿಷದ ಅಮಲು ಏರಲು ಬೀಡು…
ಅನುದಿನ ಕವನ-೫೫೫, ಕವಯತ್ರಿ: ಪ್ರೇಮಾ ನಡುವಿನಮನಿ, ಧಾರವಾಡ, ಕವನದ ಶೀರ್ಷಿಕೆ: ಕನಸುಗಳಂದ್ರ
ಕನಸುಗಳಂದ್ರ ನೀಲಿ ಬಾನಂಗಳದಲಿ ಮೂಡಿ ಬಂದಾ ಚಂದ್ರ ಈ ಎದೆಯಂಗಳದಲಿ ಆಸೆ ತಂದಿ ನೀ ಚಂದ್ರ ನೀ ಕಲ್ಲ ಮನಸಲಿ ಅರ್ಥ ತಂದಿ, ಪ್ರೀತಿ ಅಂದ್ರ ಏನೇನೋ ಹೇಳೋ ಕನಸಲಿ ನನಗೆ,ದನಿ ಇಲ್ಲ ನಿನ್ಮುಂದೆ ನಿಂತ್ರ.. ಇಡೀ ರಾತ್ರಿ ನಿನ್ನ ನೆನಪಲಿ…
ಅನುದಿನ ಕವನ-೫೫೪, ಕವಿ: ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ, ಕವನದ ಶೀರ್ಷಿಕೆ: ಕವಿತೆ!
“ಕವಿತೆಯ ಮೇಲೊಂದು ಕವಿತೆ. ಕವಿಯ ಆಂತರ್ಯ, ಕಾವ್ಯದ ಸೌಂದರ್ಯ, ಬದುಕಿನ ಮಾಧುರ್ಯಗಳ ಅವಿನಾಭಾವದ ಭಾವಗೀತೆ ಎಂದು ಹೇಳುತ್ತಾರೆ ಕವಿ ಎ.ಎನ್.ರಮೇಶ್ ಗುಬ್ಬಿ ಅವರು….! 👇👇👇👇👇 ಕವಿತೆ..! ಪದಕೆ-ಪದ ಜೋಡಿಸಿ ಭಾವಕೆ-ಜೀವ ಬೆರೆಸಿ ಮೀಟಬೇಕಿದೆ… ಕವಿತೆಯೆಂಬ ವೀಣೆಯನ್ನು.! ಮಧು-ಮಧುರ ಇಂಚರ ತುಂಬಬೇಕಿದೆ…. ಮನದ…
ಅನುದಿನ ಕವನ-೫೫೩, ಕವಯತ್ರಿ: -ರಂ.ಹೊ(ರಂಗಮ್ಮ ಹೊದೇಕಲ್) ತುಮಕೂರು, ಕವನದ ಶೀರ್ಷಿಕೆ: ಮಕ್ಳ ಪದ್ಯ
ಮಕ್ಳ ಪದ ಅಪ್ಪ- ಅಮ್ಮಂಗೆ ನಾನು ಅರ್ಥವೇ ಆಗಲ್ಲ ಅಕ್ಷರ ನಂಗರ್ಥಾಗೋದು ಕಷ್ಟನೇ ಅಲ್ವ|| ಅಪ್ಪ ಇರ್ತಾರೆ ನಿತ್ಯ ನಶೆಯ ಮೇಲೆ ಅಮ್ಮ ಕೈ ತೊಳಿತಿರ್ತಾಳೆ ಕಣ್ಣೀರಲ್ಲೆ|| ಪುಸ್ತಕ ಕಿತ್ತು ಎಸ್ದೇ ಬಿಡ್ತಾರೆ ನಮ್ಮಪ್ಪ ಸಿಟ್ ಮಾಡ್ಕಂಡು ಬಸ್ ಹತ್ತಿ ಹೊರಟೇ…
ಅನುದಿನ ಕವನ-೫೫೨, ಕವಯತ್ರಿ: ಶ್ರೀ (ಶ್ರೀಲಕ್ಷ್ಮಿ ಅದ್ಯಪಾಡಿ) ಮಂಗಳೂರು, ಕವನದ ಶೀರ್ಷಿಕೆ: ವಿರಹಿಯ ಸ್ವಗತ….
ಕವಯತ್ರಿ ಶ್ರೀ ಅವರ ಕಿರುಪರಿಚಯ: ಶ್ರೀ ಕಾವ್ಯನಾಮದಲ್ಲಿ ಕವಿತೆ ರಚಿಸುತ್ತಿರುವ ಮಂಗಳೂರಿನ ಶ್ರೀಲಕ್ಷ್ಮಿ ಅದ್ಯಪಾಡಿ ಅವರು ಬಹುಮುಖಿ. ಮಂಗಳೂರಿನಲ್ಲಿ 20-06-1990 ರಂದು ಜನಸಿದ ಶ್ರೀ ಲಕ್ಷ್ಮಿ ಅವರು ಮಂಗಳ ಗಂಗೋತ್ರಿಯಲ್ಲಿ ಫ್ಯಾಶನ್ ಡಿಸೈನ್ ನಲ್ಲಿ ಬಿ.ಎಸ್ಸಿ ಪದವಿಯನ್ನು ಪೂರ್ಣಗೊಳಿಸಿ, ಅಣ್ಣಾಮಲೈ ವಿಶ್ವವಿದ್ಯಾಲಯದಿಂದ…
ಅನುದಿನ ಕವನ-೫೫೧, ಕವಿ: ಜಯಕವಿ (ಜಯಪ್ಪ ಹೊನ್ನಾಳಿ), ಮೈಸೂರು, ಕವನದ ಶೀರ್ಷಿಕೆ: ನೀನೊಂದು ಜೀವನದಿ, ರಾಗ ಸಂಯೋಜನೆ-ಗಾಯನ: ಅತಿಶಯ ಜೈನ್, ಮೈಸೂರು
ಜು.1 ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷೆ, ಸಾಹಿತಿ ಎ. ಹೇಮಗಂಗಾ ಅವರ ಜನುಮದಿನ. ಅಂದು ಮೈಸೂರಿನ ಕವಿ ಜಯ ಕವಿ ಅವರು ‘ನೀನೊಂದು ಜೀವನದಿ’ ಕವಿತೆ ಬರೆದು ಶುಭ ಕೋರಿದರೆ ಯುವ ಗಾಯಕ ಅತಿಶಯ ಜೈನ್ ಅವರು ರಾಗ ಸಂಯೋಜಿಸಿ, ಹಾಡಿ ಹುಟ್ಟುಹಬ್ಬಕ್ಕೆ…
ಅನುದಿನ ಕವನ-೫೫೦, ಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ: ವಲಸೆ ಕಾರ್ಮಿಕ
ವಲಸೆ ಕಾರ್ಮಿಕ ತನ್ನೂರಲ್ಲಿ ಒಂದಿಷ್ಟು ಕಾಳು ಕೂಳ ನೀಡದ ಹೊಲವಿಲ್ಲದೆ, ತನ್ನವರೊಂದಿಗೆ ಬದುಕಲಿಷ್ಟು ಸಿರಿ ಸಂಪತ್ತಿನ ಬಲವಿಲ್ಲದೆ, ತನ್ನ ಕಷ್ಟಕಾಲದಲ್ಲಿ ಕೈಯಿಡಿವವರ ಕರುಣೆ ಒಲವಿಲ್ಲದೆ, ತನ್ನದಲ್ಲದ ಊರಿಗೆ ನಡೆದಾತ ವಲಸೆ ಕಾರ್ಮಿಕ. ತನಗೊಂದಿಷ್ಟು ನೆಲೆ ನೀಡಿದ ಊರಲ್ಲಿ ನೆಲೆಯಾಗಿ ನಿಂತವ, ತನ್ನ…
ಅನುದಿನ ಕವನ-೫೪೯, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ:ಶರೀಫನ ತಂಬೂರಿ
ಶರೀಫನ ತಂಬೂರಿ ನನ್ನ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿಲ್ಲ ಅವರೂ ಪ್ರಶ್ನೆಗಳಲ್ಲೇ ಉತ್ತರಿಸಿದರು ಪ್ರಶ್ನೆಗೆ ಪ್ರಶ್ನೆಯೇ ಉತ್ರರವಾದೀತೇ? ಉತ್ತರಗಳಿಲ್ಲದ ಪ್ರಶ್ನೆಗಳು ನನ್ನ ಬಳಿಯೂ ಇರುವಾಗ ನನ್ನದೂ ತಪ್ಪಲ್ಲವೆಂದು ಹೇಗೆ ಹೇಳಲಿ? ಹಾಗೇ ಅಳು ಒತ್ತರಿಸಿ ಬರುತ್ತಿದೆ ಹೃದಯದ ಭಾರ ಹೆಚ್ಚುತ್ತಿದೆ ಮನದಾಳದ…
