1 ದಾರಿ ಕವಲಾಗಿದ್ದಕ್ಕೆ ಬೇಸರವೇನೂ ಇಲ್ಲ ಭೂಮಿತತ್ವ ತಪ್ಪಿರಬೇಕು; ನಾವು ಮತ್ತೆಂದೂ ಸಂಧಿಸಲಿಲ್ಲ 2 ಒಂದೇ ಒಂದು ಕನಸು ಬಿತ್ತು ತಾನಾಗಿಯೇ ಹೊಸ ಬಾಗಿಲೊಂದು ತೆರೆದುಕೊಂಡಿತು 3 ಹಕ್ಕಿ ಗೂಡು ಕಟ್ಟಿತು; ನಾನು ಮನೆಯನ್ನು ನಾನು ಇದ್ದಲ್ಲೇ ಉಳಿದೆ ; ಹಕ್ಕಿಗಳು…
Category: ಅನುದಿನ ಕವನ
ಅನುದಿನ ಕವನ-೧೨೯೪, ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು
ಅಕ್ಷರಗಳು ಒಣಗುವುದಿಲ್ಲ ಹೃದಯ ಹೊಕ್ಕು ಹೊರಬಂದ ಅಕ್ಷರಗಳು ಒಂದೊಂದು ಮೆಟ್ಟಿಲುಗಳಲ್ಲೂ ಕಾದು ಕುಳಿತಿರುತ್ತವೆ ಅಕ್ಷರಗಳನ್ನು ಸಹನೆಯಿಂದ ನೇವರಿಸಿ ಅವು ನಮ್ಮೊಳಗೇ ಮರಿ ಮಾಡುತ್ತವೆ ಅಕ್ಷರಗಳು ನಮ್ಮ ರುಚಿಗೆ ಈಡಾಗಿ ತುಳಿಸಿಕೊಂಡರೆ ಬೀದಿಗೆ ಬೀಳುತ್ತವೆ ಅಕ್ಷರಗಳು ಇತರರ ನಾಲಿಗೆಯಲ್ಲಿ ವರ್ಣಪಡೆದು ಬಹುರೂಪಿಯಾಗುತ್ತವೆ ಅಕ್ಷರಗಳು…
ಅನುದಿನ ಕವನ-೧೨೯೩, ಕವಿ: ವೀರೇಶ ಬ.ಕುರಿ ಸೋಂಪೂರ, ಕೊಪ್ಪಳ, ಕವನದ ಶೀರ್ಷಿಕೆ: ನಲಿ-ಕಲಿ ಮಕ್ಕಳು
ನಲಿ-ಕಲಿ ಮಕ್ಕಳು ನಲಿ-ಕಲಿ ಮಕ್ಕಳು ನಾವು ಮುಗ್ಧ ಮನಸಿನ ಜೀವಗಳು. ಶಾಲೆಯೆಂಬ ತೋಟದಲ್ಲಿ ಅರಳುವಂತವ ಹೂವುಗಳು. ಹರುಷದಿ ಬರುವೆವು ಶಾಲೆಗೆ ಓದು ಬರಹವ ಕಲಿಯಲು. ಲೆಕ್ಕ, ಆಟ, ಬಿಸಿ-ಬಿಸಿ ಊಟ ಆಡಿ ಕುಣಿದು ನಲಿಯಲು. ಚಿತ್ರವ ಬಿಡಿಸಿ, ಬಣ್ಣವ ಹಚ್ಚಿ ಸಂತಸಪಡುವೆವು…
ಅನುದಿನ ಕವನ-೧೨೯೨ , ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ನಿಲ್ಲಿಸು ನೋಯಿಸುವ ಆಟ
ನಿಲ್ಲಿಸು ನೋಯಿಸುವ ಆಟ ನೋಯಿಸುವ ಆಟ ನಿಲ್ಲಿಸಿಬಿಡು ಗೆಳೆಯ…. ಇಲ್ಲವಾಗಿಸುವವರು ಎಂದಿಗೂ ಉಳಿದಿಲ್ಲ ಇತಿಹಾಸದ ಪುಟಗಳಲ್ಲಿ. ಯಾರನ್ನು ಉಳಿಸುತ್ತೇನೆ ಎಂಬ ಪಣ ತೊಟ್ಟಿರುವೆಯೋ ಅದು ನಿನ್ನ ಉಳಿಸಿದರೆ ಸಾಕು. ‘ಕೊಂದು ಕಾಯು ನನ್ನ’ ಎಂದು ಯಾವ ಧರ್ಮವೂ ಪಿಸುಗುಟ್ಟಿಲ್ಲ…. ತಬ್ಬಿದರೆ ಮನುಷ್ಯತ್ವ…
ಅನುದಿನ ಕವನ-೧೨೯೧, ಕವಿ: ಕೆಂಚನೂರಿನವ (ಶಂಕರ ಎನ್ ಕೆಂಚನೂರು), ಕುಂದಾಪುರ
ನೀನು ಹೋಗುವ ಮೊದಲು ನಕ್ಷತ್ರಗಳ ಕತೆ ಹೇಳಿದ್ದೆ ಅವು ಸುಟ್ಟು ಹೋದ ನಂತರವೂ ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ ಚಂದ್ರನಿಲ್ಲದ ರಾತ್ರಿಯಲ್ಲಿಯೂ ಬಾನನ್ನು ಆಕ್ರಮಿಸುವ ಕುರಿತು ಅವು ಯೋಚಿಸುವುದಿಲ್ಲ ಎಂದಿದ್ದೆ ಈಗ ನೀನು ಹೋದ ನಂತರವೂ ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ ನೀನಿಲ್ಲದ…
ಅನುದಿನ ಕವನ-೧೨೯೦, ಕವಿ: ಆರ್ ನಾಗರಾಜು, ಬಾಗಲಕೋಟೆ, ಕವನದ ಶೀರ್ಷಿಕೆ: ಯಾರಿವರು?
ಯಾರಿವರು? ಯಾರಿವರು ಬಾಧೆ ಹುಲ್ಲಿನ ಅರಮನೆಯಲ್ಲಿ ಜನಿಸಿ ಹರಕು ಬಟ್ಟೆಯ ಹಾಸಿಗೆಯಲ್ಲಿ ಮಲಗಿ ಅನ್ನವಿಲ್ಲದೆ ಹಸಿವನ್ನು ತಾಳಿಕೊಂಡು ಮಾಯಾ ಪ್ರಪಂಚದ ಜನರಿಗೆ ಬೇಕಾದವರು ಯಾರಿವರು ಬೀದಿ ಬೀದಿಯನ್ನು ಹಸನುಗೊಳಿಸಿ ಸಿರಿವಂತರ ಹಾದಿಗೆ ಹಾಲೆರೆದು ರಾಜಕಾರಣಿಗಳ ದಾರಿಗೆ ಹೂವು ಚೆಲ್ಲಿ ಅರೆ ಹೊಟ್ಟೆಯಲ್ಲಿ…
ಅನುದಿನ ಕವನ-೧೨೮೯, ಕವಿ: ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ, ಕವನದ ಶೀರ್ಷಿಕೆ: ತುತ್ತಿನಚೀಲ
ತುತ್ತಿನ ಚೀಲ ಹತ್ತು ಹರದಾರಿ ನಡೆದರೂ ತುತ್ತಿನ ಚೀಲ ತುಂಬಲಿಲ್ಲ ಮಡುವಿನ ನೀರು ಕುಡಿದು ಮುಗ್ಗುಲು ಜ್ವಾಳಕೆ ಕಾದು ಸವರಾತ್ರಿಗೆ ತಂದು ತಿಂದು ಮಬ್ಬು ಗತ್ತಲೆ ಸಿಳಿ ದಾರಿಗುಂಟ ಸೈನಿಕನಂತೆ ನಡೆದ ದಾರಿ ನಗುತ್ತಿತ್ತು ಹಸಿದೊಡಲ ಕಂಡು ನೆಲ ಸಿಳಿ ಒಡ್ಡಿನೊಡಲ…
ಅನುದಿನ ಕವನ-೧೨೮೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ:ಸಂಬಂಧಗಳೇ ಹೀಗೆ…
ಸಂಬಂಧಗಳೇ ಹೀಗೆ… ಅನುಮಾನದ ಗಾಳಿ ಬೀಸೆ ಗಂಟಾಗುವವು ಸಂಬಂಧಗಳು ಅಹಂಕಾರದ ತೊಡರು ಸೊಂಕೆ ಕಗ್ಗಂಟಾಗುವವು ಸಂಬಂಧಗಳು ಬಿಡಿಸಿದಷ್ಷೂ ಸಿಕ್ಕಾಗುವವು ಎಳೆದಾಡಿ ಎಳೆದಾಡಿದಷ್ಟೂ ಮೈಮನಗಳು ಸೋಲುವವು ಸಿಕ್ಕುಗಳು ಬೆಟ್ಟವಾಗುವವು ದಾರ ಹಳತಾದಷ್ಟು ಗಂಟು ಗಟ್ಟಿ ದ್ವೇಷ ದಪ್ಪವಾಗಿ ಆಗುವುದು ಜಟ್ಟಿ ಪ್ರೀತಿಯ ಸೂಜಿಗೆ…
ಅನುದಿನ ಕವನ-೧೨೮೭, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಒಲವ ಮೊಹರು
ಒಲವ ಮೊಹರು ಕಡು ಬಿಸಿಲಿನ ಮರದ ನೆರಳಿಗೆ ಹೀಗೆ ಎದೆಯ ಸಂಕಟಗಳ ಸುರುವ ಬಾರದಿತ್ತು ನಾನು; ಅವಳ ಮರುಳ ಮಾತಿಗೆ ಹೀಗೆ ಸುಖಾ ಸುಮ್ಮನೆ ಜಾರಬಾರದಾಗಿತ್ತು ನಾನು. ನಿಮ್ಮ ಎಳೆ ದಳಗಳಿಂದ ಹೀಗೆ ಇರಿ -ಯ ಬೇಡಿರಿ ಉಪವನದ ಹೂಗಳೇ !…
ಅನುದಿನ ಕವನ-೧೨೮೬, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಆಕಾಶ ಬಿಕ್ಕುತ್ತಿದೆ
🌧️ ಆಕಾಶ ಬಿಕ್ಕುತಿದೆ 🌩️ ಆಕಾಶ ಬಿಕ್ಕುತಿದೆ ಮುಗಿಲ ಮುಸುಕ ಮರೆಗೆ ಮಾತಿರದ ತಾರೆಗಳು ಅಡಗಿ ಕುಳಿತ ಗಳಿಗೆ. ಸೂರ್ಯ ಚಂದ್ರರಿರದೆ, ಸುರಿದ ಕಪ್ಪು ಸುತ್ತ ಚೆಲ್ಲಿ ಹಸಿರ ಉಸಿರು ಅಡಗಿ ಹೋಗಿ ಉಳಿವ ದಾರಿ ಎಲ್ಲಿ? ಕುದಿವ ಕಡಲು ಹೊರಳುತ್ತಿದೆ…
